ಟುಡೇ ಹಾಸನ ನ್ಯೂಸ್ ವರದಿ
ರಾಮಾಯಣ ಸಂಸ್ಕೃತದಲ್ಲಿ ಬರೆದವರು ವಾಲ್ಮೀಕಿ ಅವರ ನಡೆದಂತಹ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕು ಎಂದು ಸಂಸದರಾದ ಶ್ರೇಯಸ್ ಎಂ. ಪಟೇಲ್ ಎಂದು ತಿಳಿಸಿದರು.
ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ಜನರು ಮಕ್ಕಳಿಗೆ ರಾಮಾಯಣ ತಿಳಿಸಬೇಕು ಅವರ ಆದರ್ಶಗಳನ್ನು ತಿಳಿಸಿ ಕೊಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ಮಾತನಾಡಿ ಭರತ ಖಂಡದಲ್ಲಿ 4 ಯುಗಗಳನ್ನು ಕಾಣುತ್ತೇವೆ ಸತ್ಯಯುಗ, ತೇತ್ರ ಯುಗ,ದ್ವಾಪರಯುಗ, ಕಲಿಯುಗ ಈ ನಾಡಿನಲ್ಲಿ ವಾಲ್ಮೀಕಿ ರಾಮಾಯಣ ಹತ್ತಿರದಿಂದ ನೋಡಿದಂತವರು ಸೀತೆಯ ವನವಾಸದಲ್ಲಿ ಲವಕುಶ ಜನನ ವಾಲ್ಮೀಕಿ ಅವರ ಆಶಯದಲ್ಲಿ ಜನನ ಆಗುತ್ತದೆ. ವಾಲ್ಮೀಕಿ ಕುಟಿಲತೆ ಇರುವ ಶ್ರೀರಾಮ ವಾಲ್ಮೀಕಿ ರಾಮಾಯಣ ಸಾಹಿತ್ಯಕ್ಕೆ ಸಂಗೀತಕ್ಕೆ ಕಲೆಗೆ ಸೇರಿರುತ್ತದೆ. ರಾಮಾಯಣ ಆಗಿನ ಕಾಲದಲ್ಲಿ ನಡೆದಂತಹ ಸನ್ನಿವೇಶಗಳನ್ನು ಬಹಳ ಅಚ್ಚುಕಟ್ಟಾಗಿ 24000 ಶ್ಲೋಕಗಳ ಮೂಲಕ ಜನಸಾಮಾನ್ಯರಿಗೆ ಕೊಟ್ಟಂತಹ ರಾಮಾಯಣ ಎಂದಿಗೂ ಪ್ರಸ್ತುತ. ಏಷ್ಯಾದಲ್ಲಿ ರಾಮಾಯಣ ಬೇರೆ ಬೇರೆ ದೇಶಗಳಲ್ಲಿ ಬೇರೆ ಭಾಷೆಗಳಲ್ಲಿ ರಾಮಾಯಣ ತಮ್ಮ ಜೀವನದಲ್ಲಿ ಅಸುವಕ್ಕಾಗಿದೆ ಎಂದರು.
ಗಂಡ ಹೆಂಡತಿಯ ಪವಿತ್ರವಾದ ಸಂಭಂದ, ಅಣ್ಣಾ ತಮ್ಮಂದಿರ ವಾತ್ಸಲ್ಯ, ಗುರು ಶಿಷ್ಯರ ನಡುವಿನ ಬಾಂಧವ್ಯ ಬಿಂಬಿಸುವ ರಾಮಾಯಣ ಎಲ್ಲರಿಗೂ ಅನುಕರಣೀಯ ಭಾರತೀಯ ಪ್ರಜೆಗಳು ರಾಮ ರಾಜ್ಯದಲ್ಲಿ ಸುಭಿಕ್ಷವಾಗಿ ಇರಬೇಕು ಎಂದು ಬೃಹತ್ ಕಾವ್ಯವನ್ನು ರಚಿಸಿದ್ದಾರೆ. ಭರತ ಖಂಡದಲ್ಲಿ ರಾಮಾಯಣ ಮಹಾಭಾರತ ಬೃಹತ್ ಕಾವ್ಯವನ್ನು ಕಾಣಬಹುದು ಎಂದು ತಿಳಿಸಿ,ರಾಮನ ಆದರ್ಶ, ಸೀತೆಯ ಬದ್ಧತೆ ಆದರ್ಶ ಇವುಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಗರಸಭೆಯ ಅಧ್ಯಕ್ಷರಾದ ಚಂದ್ರೇಗೌಡ ಎಂ ಅವರು ಮಾತನಾಡಿ ಡಕಾಯಿಯುತನಾಗಿದ್ದ ರತ್ನಾಕರ ನಾರದ ಮುನಿಯ ಕಟ್ಟು ಮಾತಿನಿಂದ ಪರಿವರ್ತನೆಗೊಂಡು ರಾಮಾಯಣವನ್ನು ರಚಿಸಿದವರು. ರಾಮ ಎನ್ನುವ ಎರಡು ಅಕ್ಷರದಿಂದ ಸಂಪೂರ್ಣವಾದ ರಾಮಾಯಣ ರಚಿಸಿದ್ದಾರೆ. 24000 ಪದ್ಯಗಳು ನೊಳಗೊಂಡ ರಾಮಾಯಣ ದರ್ಶನಂ ವನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ರಾಮಾಯಣನನ್ನು ಸತ್ಯ ನೀತಿ ಪ್ರೇಮ ಹಿರಿಯರಿಗೆ ಗೌರವ ಸಂಕೇತ ಅಂತಹ ರಾಮಾಯಣವನ್ನು ವೈಭವಿಕರಿಸಿ ಇಡೀ ಮನುಕುಲ ಜಗತ್ತು ಇರುವವರೆಗೂ ಶಾಶ್ವತವಾಗಿ ಉಳಿಯುವ ರೀತಿಯಲ್ಲಿ ರಾಮಾಯಣ ರಚಿಸಿರುವ ವಾಲ್ಮೀಕಿ ಅವರಿಗೆ ನಮನ ಸಲ್ಲಿಸಿದವರು.
ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಅಪ್ಪಾಜಿಗೌಡ ಟಿ.ಹೆಚ್ ಅವರು ಮಾತನಾಡಿ ವಾಲ್ಮೀಕಿಯ ಜೀವನ ಚರಿತ್ರೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮೊಹಮ್ಮದ್ ಸುಜೀತ ಎಮ್. ಎಸ್, ಅಪರ ಜಿಲ್ಲಾಧಿಕಾರಿಗಳಾದ ಕೆ. ಟಿ ಶಾಂತಲಾ ಮತ್ತಿತರರು ಭಾಗವಹಿಸಲಿರುವರು. ಸ್ವತಂತ್ರ ಹೋರಾಟಗಾರರಾದ ಶಿವಣ್ಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ದೂದ್ ಪಿರ್ ಮತ್ತಿತರರು ಉಪಸ್ಥಿತಿಯಲ್ಲಿದ್ದರು.