ಟುಡೇ ಹಾಸನ ನ್ಯೂಸ್, ಬೇಲೂರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಬೇಲೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ವಿಂಪು ಸಂತೋಷ್ ಮತ್ತು ಯುವ ಘಟಕದ ಅಧ್ಯಕ್ಷರಾಗಿ ಹೆಚ್.ಸಿ. ಚೇತನ್ ಆಯ್ಕೆಯಾಗಿದ್ದಾರೆ ಎಂದು ಬೇಲೂರು ತಾಲೂಕು ವೀರಶೈವ ಲಿಂಗಾಯತ ಮಹಾಸಭದ ಅಧ್ಯಕ್ಷ ಎ ಎಸ್ ಬಸವರಾಜು ತಿಳಿಸಿದ್ದಾರೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿನಾಂಕ-09-10-2024 ನೇ ಬುಧವಾರ ನೆಹರು ನಗರದ ಖಾಸಗಿ ಗೃಹದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಬೇಲೂರು ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯ ನಿರ್ವಾಹಕ ಸಾಮಾನ್ಯ ಸದಸ್ಯರ ಸಭೆಯಲ್ಲಿ ಒಮ್ಮತದ ಅಭಿಪ್ರಾಯವನ್ನು ಪಡೆದು ಬೇಲೂರು ತಾಲೂಕು ಮಹಿಳಾ ಘಟಕಕ್ಕೆ ವಿಂಪು ಸಂತೋಷ್ ಅಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ವಿಜಯ ಧರ್ಮಪ್ಪ ಇವರನ್ನು ಆಯ್ಕೆ ಮಾಡಲಾಗಿದೆ ಎಂದ ಅವರು ಇದೇ ಸಂದರ್ಭದಲ್ಲಿ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಎಚ್ ಸಿ ಚೇತನ್ ಇವರನ್ನು ಆಯ್ಕೆ ಮಾಡಲಾಗಿದ್ದು ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಪಡುವಳಲು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಬೇಲೂರಿನಲ್ಲಿ ಈಗಾಗಲೇ ಸಕ್ರಿಯವಾಗಿ ಕೆಲಸವನ್ನು ಮಾಡುತ್ತಾ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ 2024 ರಿಂದ 2029 ರ ತನಕ ಆಯ್ಕೆಯಾದ ಕಾರ್ಯನಿರ್ವಾಹಕ ಸಾಮಾನ್ಯ ಸದಸ್ಯರು ಮತ್ತು ಪದಾಧಿಕಾರಿಗಳ ಸರ್ವರ ಸಹಕಾರದಿಂದ ಬೇಲೂರು ತಾಲೂಕಿನಲ್ಲಿ ಉತ್ತಮ ಸಂಘಟನೆಯ ಕೆಲಸ ಮಾಡುವ ಜೊತೆಗೆ ಸದಸ್ಯತ್ವ ನೋಂದಾವಣೆ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಲು ಮಹಾ ಸಭಾ ಮಹಾಸಭಾ ಸನ್ನದ್ಧವಾಗಿದೆ ಇದಕ್ಕೆ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಯುವ ಘಟಕದ ಅಧ್ಯಕ್ಷರು ಹೆಚ್ಚಿನ ಕಾರ್ಯಪ್ರವೃತ್ತರಾಗುವ ಮೂಲಕ ಕೆಲಸವನ್ನು ಮಾಡಲಿ ಎಂದು ತಿಳಿಸಿದರು.
ವರದಿ :- ಹೆಬ್ಬಾಳು ಹಾಲಪ್ಪ.