ಟುಡೇ ಹಾಸನ ನ್ಯೂಸ್ ವರದಿ
ಹಾಸನಾಂಬ ದರ್ಶನೋತ್ಸವ ಈ ಬಾರಿ ಅ.೨೪ ರಿಂದ ನ.೩ ರ ವರೆಗೆ ನಡೆಯಲಿದ್ದು, ಬಾಗಿಲು ತೆರೆಯುವ ಹಾಗೂ ಮುಚ್ಚುವ ದಿನ ಹೊರತುಪಡಿಸಿ ಉಳಿದ ೯ ದಿನದ ೨೪ ಗಂಟೆಗಳ ಕಾಲ ಸಾರ್ವಜನಿಕರಿಗೆ ದರ್ಶನ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದರು.
ಹಾಸನಾಂಬ ದರ್ಶನೋತ್ಸವ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಸಿದ್ಧತೆ ಕುರಿತು ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎಲ್ಲ ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಎಲ್ಲಿಯೂ ಲೋಪವಾಗದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ತೀವ್ರತರವಾದ ವಿಶೇಷ ಚೇತನರಿಗೆ ವೀಃಲ್ ಚೇರ್ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ದರ್ಶನಕ್ಕೆ ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಗರದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿರುವ ಹಳೇ ವಾಹನಗಳನ್ನು ಕೂಡಲೇ ತೆರವು ಮಾಡಬೇಕು. ಎಲ್ಲಿಯೂ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ನಗರದ ಎಲ್ಲ ರಸ್ತೆಗಳ ಗುಂಡಿ ಮುಚ್ಚಬೇಕು, ಜಾತ್ರಾ ಮಹೋತ್ಸವ ಮತ್ತಷ್ಟು ಕಳೆಗಟ್ಟುವಂತೆ ಮಾಡಲು ಸರ್ಕಾರದ ಎಲ್ಲ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಬೇಕಿದೆ. ದೇವಾಲಯದಲ್ಲಿ ಹೂವಿನ ಅಲಂಕಾರವನ್ನು ಎರಡು ದಿನಕ್ಕೊಮ್ಮೆ ಬದಲಾವಣೆ ಮಾಡಿಸಬೇಕು. ದೇವಾಲಯದ ಬಳಿ ಸೆಲ್ಫಿ ಸ್ಟ್ಯಾಂಡ್ ನಿರ್ಮಿಸಬೇಕು. ಕುಡಿಯುವ ನೀರು, ಶೌಚಾಲಯ ಮತ್ತಿತರ ಮೂಲ ಸೌಕರ್ಯಗಳಲ್ಲಿ ಕೊರತೆ ಆಗಬಾರದು ಎಂದು ಸೂಚಿಸಿದರು.
ಭಕ್ತಾದಿಗಳು ದೇವಿ ದರ್ಶನಕ್ಕೆ ೩೦೦ ರೂ ಟಿಕೇಟ್ ಪಡೆದವರಿಗೆ ಒಂದು ಲಡ್ಡು, ೧೦೦೦ ರೂ ಟಿಕೇಟ್ ಗೆ ಎರಡು ಲಡ್ಡು ವಿತರಣೆ ಮಾಡಲಾಗುವುದು. ಈ ಟಿಕೆಟ್‌ಗಳಲ್ಲಿ ಬಾರ್ ಕೋಡ್ ಇರುತ್ತದೆ. ಹೊಸ ಬಸ್ ನಿಲ್ದಾಣದಿಂದ ಹಾಸನಾಂಬ ದೇವಾಲಯಕ್ಕೆ ಭಕ್ತಾದಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ವಿಶೇಷವಾಗಿ ಅ.೨೪ ರಂದು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಪ್ರಥಮ ಬಹುಮಾನ ೧ ಲಕ್ಷ ರೂ.ನಗದು, ದ್ವಿತೀಯ ಬಹುಮಾನ ೫೦ ಸಾಔಇರ ರಊ.ನೀಡಲಾಗುವುದು. ಸಮೂಹ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ವಿಡಿಯೋಗಳನ್ನು ಮಾಡಿ ನಿಗದಿತ ವೆಬ್ ಸೈಟ್‌ಗೆ ಅಪ್ ಲೋಡ್ ಮಾಡಬೇಕು. ಇವುಗಳಲ್ಲಿ ಉತ್ತಮ ೧೬ ತಂಡಗಳನ್ನು ಆಯ್ಕೆ ಮಾಡಿ ಅ.೨೪ ರಂದು ನಗರದ ಹೇಮಾವತಿ ಪ್ರತಿಮೆ ಬಳಿ ಸಂಜೆ ೬ ಗಂಟೆಗೆ ಸ್ಪರ್ಧೆ ನಡೆಸಲಾಗುವುದು ಎಂದು ತಿಳಿಸಿದರು.
ಅ.೨೬ ರಿಂದ ೨೯ ರವರಿಗೆ ಫಲಪುಷ್ಪ ಪ್ರದರ್ಶನವನ್ನು ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಏರ್ಪಡಿಸಲಾಗಿದ್ದು, ವಯಸ್ಕರಿಗೆ ೧೦ ರೂ., ಮಕ್ಕಳಿಗೆ ಐದು ರಊಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಶಾಲಾ ಸಮವಸ್ತçದಲ್ಲಿ ಬರುವ ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ. ಮನೋರಂಜನೆಗಾಗಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರತಿದಿನ ದೊನ್ನೆ ಪ್ರಸಾದ ಮತ್ತು ಸಿಬ್ಬಂದಿಗೆ ವ್ಯವಸ್ಥೆ ಮಾಡಿರುವ ಆಹಾರದ ಗುಣಮಟ್ಟವನ್ನು ಪರಿಶೀಲಿಸುತ್ತಿರಬೇಕು. ಇಬ್ಬರು ವೈದ್ಯರು, ಇಬ್ಬರು ನರ್ಸಿಂಗ್ ಸಿಬ್ಬಂದಿಯನ್ನು ಪ್ರಥಮ ಚಿಕಿತ್ಸೆಗೆ ನೀಯೋಜಿಸುವ ಜತೆಗೆ ಅಗತ್ಯ ಔಷಧಿಗಳನ್ನು ಸುಸಜ್ಜಿತ ಅಂಬುಲೆನ್ಸ್ನೊAದಿಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ೪.೪೫ ರಿಂದ ೬ ಗಂಟೆಯವರೆಗೆ ದೇವಿ ಕೀರ್ತನೆಗಳನ್ನು ಹಾಡಲು ಆಸಕ್ತಿ ಇರುವ ಉತ್ತಮ ಕಂಠಸಿರಿಯಲ್ಲಿ ಹಾಡುವವರಿಂದ ಭಕ್ತಿ ಸುಧೆ ನಡೆಯುತ್ತದೆ ಎಂದರು.
ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಪ್ಯಾರಾ ಗ್ಲೆöÊಂಡಿAಗ್, ಪ್ಯಾರಾ ಮೋಟರಿಂಗ್ ಹಾಗೂ ಹಾಟ್ ಹೇರ್ ಬಲೂನ್ ಆಯೋಜನೆ ಮಾಡಲಾಗಿದೆ. ಭಕ್ತಾದಿಗಳು ದೇವಿ ದರ್ಶನ ಪಡೆದ ನಂತರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಹಾಗೂ ದೇವಸ್ಥಾನಗಳ ಭೇಟಿ ನೀಡಲು ಸಹಕಾರಿಯಾಗುವಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ಯಾಕೇಜ್ ಟೂರ್ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.