ಟುಡೇ ಹಾಸನ ನ್ಯೂಸ್ ಬೇಲೂರು
ದೇಶ ಕಾಯುವ ಸೈನಿಕರಂತೆ, ಇಡೀ ಪಟ್ಟಣ,ನಗರವನ್ನು ಸ್ವಚ್ಛತೆ ಮಾಡುವ ಮೂಲಕ ಜನರ ಆರೋಗ್ಯಕ್ಕೆ ಮುನ್ನುಡಿ ಬರೆಯುವ ಪೌರ ಕಾರ್ಮಿಕರು ನೈಜ ಸೇನಾನಿಗಳು ಎಂದು ಬೇಲೂರು ಪುರಸಭಾ ಎ.ಆರ್.ಅಶೋಕ ಹೇಳಿದರು.
ಬೇಲೂರು ಪಟ್ಟಣದ ಪುರಸಭಾ ಅವರಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ನಡೆದ ಸಮಾರಂಭ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಪೌರಕಾರ್ಮಿಕರು ದಿನನಿತ್ಯ ಸ್ಚಚ್ಚತೆ ಅವರು ನೀಡುತ್ತಿರುವ ಕೊಡುಗೆ ಬಗ್ಗೆ ಒಂದು ದಿನ ಮಾತನಾಡಿದರೆ ಸಾಲದು, ಮತ್ತು ಪೌರಕಾರ್ಮಿಕರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ಶೀಘ್ರವೇ ನಡೆಸಲಾಗುತ್ತದೆ. ಅಲ್ಲದೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಯಾವುದೇ ತಾರತಮ್ಯವಿಲ್ಲದೆ ನೀಡುವ ಮೂಲಕ ಅವರ ಗೌರವ ಕಾಪಾಡುವ ನಿಟ್ಟಿನಲ್ಲಿ ಪುರಸಭೆ ಗಮನ ನೀಡುವ ವಿಶ್ವಾಸದ ಮಾತುಗಳನ್ನು ಆಡಿದರು.
ಬೇಲೂರು ಪುರಸಭಾ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ಪೌರ ಕಾರ್ಮಿಕರ ಬಗ್ಗೆ ೧೨ ನೇ ಶತಮಾನದಲ್ಲಿನ ಸತ್ಯಕ್ಕ ಕಾಯಕ ನಿಷ್ಠೆ ಮತ್ತು ಆಕೆಯ ಕೆಲಸದ ಕಾರ್ಯಪ್ರವೃತ್ತಿ ಪೌರ ಕಾರ್ಮಿಕರ ಮಹತ್ವಪೂರ್ಣತೆಯನ್ನು ಕಾಣಬಹುದು. ಕಸ ವಿಲೇವಾರಿಗೆ ಬ್ರಹ್ಮ ರಾಕ್ಷಸನಂತೆ ಕಾಡುವ ಪ್ಲಾಸ್ಟಿಕ್ ಬಳಕೆ ನಿಜಕ್ಕೂ ಕಷ್ಟವಾಗುತ್ತಿದೆ.ಅದ್ದರಿಂದ ಪ್ಲಾಸ್ಟಿಕ್ ಬಳಕೆ ಇಳಿಮುಖವಾಗಬೇಕಿದೆ. ವಿಶೇಷವಾಗಿ ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯಗಳು ಸಮಪರ್ಕವಾಗಿ ಸಿಗುತ್ತಿಲ್ಲ, ಪೌರ ಕಾರ್ಮಿಕರಿಗೆ ನೀಡುವ ಸವಲತ್ತುಗಳನ್ನು ನೀರುಗಂಟಿಗಳಿಗೆ ನೀಡಬೇಕಿದೆ. ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ದುಶ್ಚಟಗಳಿಂದ ದೂರ ಇರಬೇಕು ಎಂದರು.
ಸದಸ್ಯರಾದ ಜಮಾಲ್ಲುದ್ದೀನ್ ಮತ್ತು ಬಿ.ಸಿ.ಜಗದೀಶ್ ಮಾತನಾಡಿ, ಪ್ರತಿನಿತ್ಯ ಬೆಳಿಗ್ಗೆ ಮಳೆ.ಚಳಿಎನ್ನದೆ ಪಟ್ಟಣದ ಸ್ವಚ್ಚತೆ ನಡೆಸುವ ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳಲ್ಲಿ ಸೂರು ಇಲ್ಲದೆ ಪರದಾಟವಾಗಿದೆ.ಹೊರ ಗುತ್ತಿಗೆ ನೌಕರರ ಸಂಕಷ್ಟದಲ್ಲಿದ್ದಾರೆ.ಪೌರ ಕಾರ್ಮಿಕರ ಬಗ್ಗೆ ಜನತೆಗೆ ಇರುವ ಕೀಳಿರಿಮೆ ತೊರೆದು ನಮ್ಮಂತೆ ಮನುಷ್ಯರಂತೆ ಕಾಣುವ ಸೌಜನ್ಯ ಬೆಳೆಸಿಕೊಳ್ಳಬೇಕಿದೆ. ಮುಂದಿದಲ್ಲಿ ಪುರಸಭೆ ಪ್ಲಾಸ್ಟಿಕ್ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ದಿನದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಬಹುಮಾನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಸುಜಯ ಕುಮಾರ್, ಘನ ತ್ಯಾಜ್ಯ ಘಟಕದ ಅಧಿಕಾರಿ ಚಂದ್ರಶೇಖರ,ಉಪಾಧ್ಯಕ್ಷೆ ಉಷಾ ಸತೀಶ್, ಸದಸ್ಯರಾದ ಜಮಾಲ್ಲುದ್ದಿನ್, ಬಿ.ಸಿ.ಜಗದೀಶ್, ಅಶೋಕ್, ಶ್ರೀನಿವಾಸ್,
ಪ್ರಭಾಕರ್, ಸೌಮ್ಯ ಸುಬ್ರಮಣ್ಯ, ರತ್ನ ಸತ್ಯನಾರಾಯಣ, ಮೀನಾಕ್ಷಿ ವೆಂಕಟೇಶ್, ನಾಮಿನಿ ಸದಸ್ಯೆ ಸೌಭಾಗ್ಯ ಮತ್ತು ಹಿರಿಯ ಆರೋಗ್ಯ ನಿರೀಕ್ಷಕಿ ಜ್ಯೋತಿ, ಕಿರಿಯ ಆರೋಗ್ಯ ನಿರೀಕ್ಷಕ ಲೋಹಿತ್ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.
-ವರದಿ :- ದಿನೇಶ್ ಬೆಳ್ಳಾವರ