ಬೇಲೂರು ಪುರಸಭೆ 64 ಮಳಿಗೆಗಳ ಹರಾಜು ರದ್ದು : ಪುರಸಭೆ ಅಧ್ಯಕ್ಷ ಆಶೋಕ್

0
105

ಟುಡೇ ಹಾಸನ ನ್ಯೂಸ್‌ ವರದಿ ಬೇಲೂರು

ಬೇಲೂರು ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ಭಾಗವಹಿಸಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ, ಎಂಬ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಹರಾಜು ರದ್ದುಗೊಳಿಸಲಾಗಿದೆ ಎಂದು ಪುರಸಭಾ ಅಧ್ಯಕ್ಷ ಎ.ಆರ್ ಅಶೋಕ್ ತಿಳಿಸಿದ್ದಾರೆ.

ಬೇಲೂರು ಪುರಸಭೆಗೆ ಸೇರಿದ ಪಟ್ಟಣದ ಮುಖ್ಯ ರಸ್ತೆ, ಬಸ್ ಸ್ಟ್ಯಾಂಡ್ ಮುಂಬಾಗ ಹಾಗೂ ಐಡಿ.ಎಸ್.ಎಂ.ಟಿ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ 64 ಮಳಿಗೆಗಳಿಗೆ ಹರಾಜು ಕರೆಯಲಾಗಿದ್ದು, ಹಾರಜು ಪ್ರಕ್ರಿಯೆ ಪೂರ್ಣಗೊಂಡು ಸೋಮವಾರದಂದು ನಡೆಯಬೇಕಾಗಿತ್ತು , ಆದರೆ ಹರಾಜು ಪ್ರಕ್ರಿಯೆಯಲ್ಲಿ ಮಳಿಗೆ ಅವಶ್ಯಕತೆ ಇಲ್ಲದವರೇ ಬಹು ಪಾಲು ಪ್ರಭಾವಿಗಳು ಮತ್ತು ಮಧ್ಯವರ್ತಿಗಳು ಹಣ ಮಾಡುವ ಉದ್ದೇಶದಿಂದ ಪ್ರತಿ ಮಳಿಗೆಗೂ ಹರಾಜಿನಲ್ಲಿ ಭಾಗವಹಿಸಿ ನೇರವಾಗಿ ಕೆಲವು ಅಂಗಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿ 10 ಲಕ್ಷ ಹಣ ನೀಡಿದರೆ ನಾವು ಹರಾಜಿನಲ್ಲಿ ಭಾಗವಹಿಸುವುದಿಲ್ಲ ಎಂದು ನೇರವಾಗಿ ಮಾತುಕತೆ ನಡೆಸಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡದಂತೆ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯ ಅಧಿಕಾರಿ ಸುಜಯ್ ಕುಮಾರ್ ಮನವಿ ಮಾಡಿದ ಹಿನ್ನೆಲೆಯಲ್ಲಿ ಟೆಂಡರ್ ರದ್ದುಗೊಳಿಸಲಾಗಿದೆ. ಶೀಘ್ರದಲ್ಲೇ ಮರು ಟೆಂಡರ್‌ಗೆ ಪ್ರಕಟಣೆ ಹೊರಡಿಸಲು ದಿನಾಂಕ ತಿಳಿಸಲಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪಾರದರ್ಶಕವಾಗಿ ಹರಾಜು ನಡೆಸಲು, ಬಹಿರಂಗ ಅಥವಾ ಈ ಟೆಂಡದ್ ಮೂಲಕ ಹರಾಜು ಮಾಡಲು ಅವರ ಸಲಹೆ ಸಾಹಕಾರ ಪಡೆದು ತೀರ್ಮಾನಿಸಲಾಗುವುದು ಎಂದರು.

ಸಾರ್ವಜನಿಕರ ಆರೋಪ :- ಪುರಸಭಾ ವ್ಯಾಣಿಜ್ಯ ಮಳಿಗೆಗಳ ಹರಾಜು ಯಾಕ್ರಿಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ಕಳೆದ ಎರಡು ಬಾರಿಯಿಂದ ವಾಣಿಜ್ಯ ಮಳಿಗೆಗಳ ಟೆಂಡರ್ ಮುಂದೂಡಲಾಗುತ್ತಿದ್ದು ಅಲ್ಲದೆ ಹಳೆ ಬಾಡಿಗೆದಾರರಿಂದ ಹರಾಜು ಬಾಡಿಗೆಯನ್ನು ವಸೂಲಿ ಮಾಡದೆ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡುತ್ತಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.