ಲಯನ್ಸ್ ಕ್ಲಬ್ ಸಮಾಜಮುಖಿ ಸೇವಾಕಾರ್ಯ ಅಭಿನಂದನಾರ್ಹ – ಶಾಸಕರ ಮೆಚ್ಚುಗೆ.

0
54

ಟುಡೇ ಹಾಸನ ನ್ಯೂಸ್ ವರದಿ

ಅಂತರಾಷ್ಟ್ರೀಯ ಸೇವಾಸಂಸ್ಥೆಯಲ್ಲಿ ತನ್ನದೆಯಾದ ಖ್ಯಾತಿಯನ್ನು ಪಡೆದ ಲಯನ್ಸ್ ಕ್ಲಬ್ ಬೇಲೂರಿನಲ್ಲಿ ಕಳೆದ ೧೩ ವರ್ಷದಿಂದ ಸಮಾಜಮುಖಿ ಮತ್ತು ಜನಪರ ಸೇವಾ ಕಾರ್ಯಗಳು ನಿಜಕ್ಕೂ ಅಭಿನಂದನಾರ್ಹವಾಗಿದೆ ಎಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಮೆಚ್ಚುಗೆ ವ್ಯಕ್ತ ಪಡಿಸಿದರು.

ಬೇಲೂರು ಪಟ್ಟಣ ಯಗಚಿ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬೇಲೂರು ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಿದ ನೂತನ ಲಯನ್ಸ್ ಭವನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನದಲ್ಲಿ ಸ್ವಾರ್ಥವೇ ತುಂಬಿರುವ ಜಗತ್ತಿನಲ್ಲಿ ನಿಸ್ವಾರ್ಥದ ಸೇವೆ ಮಾಡುವ ಮನಸ್ಸುಗಳು ಇಳಿಮುಖವಾಗಿರುವ ಸಂದರ್ಭದಲ್ಲಿ ಜನರು ದಾನವನ್ನು ನೀಡುಲು ಶುದ್ದ ಮತ್ತು ಪ್ರಾಮಾಣಿಕ ಕೈಗಳನ್ನು ನೋಡುತ್ತಾರೆ. ಆದರೆ ಲಯನ್ಸ್ ಕ್ಲಬ್ ನಲ್ಲಿನ ಸದಸ್ಯರು ದುಡಿದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಣೆ ಮಾಡುತ್ತಿದ್ದಾರೆ. ಹಾಗೇಯೆ ಪ್ರವಾಸಿತಾಣ ಬೇಲೂರಿನಲ್ಲಿ ಸುಂದರ ಭವನ ನಿರ್ಮಿಸಿದ್ದಾರೆ. ಮುಂದಿನ ದಿನದಲ್ಲಿ ಅವರಿಗೆ ಎಲ್ಲಾ ರೀತಿಯ ಸಹಕಾರ ಜೊತೆಗೆ ನಾನು ಒಬ್ಬ ಸದಸ್ಯರಾಗಿ ಸೇವೆ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದರು.

ಜಿಲ್ಲಾ ರಾಜ್ಯಪಾಲರಾದ ಬಿ.ಎಂ.ಭಾರತಿ ಮಾತನಾಡಿ, ಬೇಲೂರು ಲಯನ್ಸ್ ಕ್ಲಬ್ ಅಲ್ಪ ಅವಧಿಯಲ್ಲಿ ಇಂತಹ ಬೃಹತ್ ಭವನ ನಿರ್ಮಿಸಿದ್ದಾರೆ. ಅಲ್ಲದೆ ಹಬ್ಬದ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಅವರ ಪ್ರೀತಿ ಅಭಿಮಾನ ಎಂದಿಗೂ ಮರೆಯುತ್ತಿಲ್ಲ ಎಂದರು.

ಬೇಲೂರು ಪುರಸಭಾ ಮಾಜಿ ಅಧ್ಯಕ್ಷ ಎ.ಆರ್. ಅಶೋಕ್ ಮಾತನಾಡಿ, ಹೊಯ್ಸಳರ ಕಲಾನಾಡಿನಲ್ಲಿನ ಲಯನ್ಸ್ ಸಂಸ್ಥೆ ಹೆಮ್ಮಾರವಾಗಿ ಬೆಳೆದಿದೆ. ಅವರು ದೀನ, ದಲಿತರು, ಶೋಷೀತರು, ನಿರ್ಗತಿಕರು ಮತ್ತು ವಿಕಲಚೇತನವರ ಬಗ್ಗೆ ವಿಶೇಷವಾದ ಅಸಕ್ತಿಯನ್ನು ವಹಿಸಿ ಕೆಲಸ ಮಾಡಲಿ ಪುರಸಭೆಯಿಂದ ಸವಲತ್ತುಗಳನ್ನು ನೀಡುವ ಭರವಸೆ ನೀಡಿದರು.

ತಹಸೀಲ್ದಾರ್ ಎಂ.ಮಮತ ಮಾತನಾಡಿ, ಲಯನ್ಸ್ ಕ್ಲಬ್ ಆರೋಗ್ಯ, ಶಿಕ್ಷಣ,ಪರಿಸರ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಮಾಡುತ್ತಿದೆ. ಮುಂದಿನ ದಿನದಲ್ಲಿ ತಾಲ್ಲೂಕು ಆಡಳಿತ ಸಹಭಾಗಿತ್ವದಿಂದ ಕೆಲಸ ಮಾಡುವ ಮೂಲಕ ಹೆಚ್ಚಿನ ಜನರಿಗೆ ಸೇವೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಪ್ರಭಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ, ಶಿವಗಂಗಾ ಗ್ರಾನೈಟ್ ಉದ್ಯಮಿ ರಾಜಶೇಖರ್, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಕೃಷ್ಣೇಗೌಡ, ರಾಮರಾಜ ಅರಸು, ರಾಮಚಂದ್ರು, ಸಂಜೀತ್ ಶೆಟ್ಟಿ, ರಾಬಿ ಸೋಮಯ್ಯ, ಅಬ್ದುಲ್ ಲತೀಫ್, ಎಂ.ಪಿ.ಪೂವಯ್ಯ, ಕಾರ್ಯದರ್ಶಿ ಮುಕ್ತಿಯಾರ್ ಅಹಮದ್, ಖಜಾಂಚಿ ಪ್ರಶಾಂತ ಶೇಟ್ಟಿ, ಗೀತಾರಾವ್, ಹಾಜರಿದ್ದ ಸಮಾರಂಭದಲ್ಲಿ ಮೈಸೂರು ಜಯದೇವ ಹೃದೋಗ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಡಾ.ವೈ.ಎಸ್.ಶ್ರೀಮಂತ್ ಇವರನ್ನು ವಿಶೇಷವಾಗಿ ಅಭಿನಂದನೆ ಸಲ್ಲಿಸಲಾಯಿತು. ಸಮಾರಂಭ ನಿರೂಪಣೆಯನ್ನು ಹೆಬ್ಬಾಳು ಹಾಲಪ್ಪ ಮತ್ತು ಕೆ.ಎಲ್.ಸುರೇಶ್ ನಡೆಸಿಕೊಟ್ಟರು.
,,,,,,,,,,,,,,,,,,,,,,,,,,,,,,,,,,,,,,,,,,,,,,
ಬಾಕ್ಸ್ ನ್ಯೂಸ್
ಬೇಲೂರು ಲಯನ್ಸ್ ಕ್ಲಬ್ ೨೦೧೧ ರಲ್ಲಿ ಎನ.ಆರ್.ಗಿರೀಶ್ ಹಾಕಿದ ಅಡಿಪಾಯ ಇಂದು ಹೆಮ್ಮಾರವಾಗಿದೆ. ಇಂತಹ ಸಂಸ್ಥೆಗೆ ಸೇವಾಕಾರ್ಯ ನಡೆಸಲು ಸುಂದರ ಭವನವಾಗಿದೆ ಮುಂದಿನ ದಿನದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಆರೋಗ್ಯ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ತಿಳಿಸಿದ ಅವರು ಭವನ ನಿರ್ಮಾಣಕ್ಕೆ ೨೭ ಟ್ರಸ್ಟಿಗಳು ಮತ್ತು ಸಂಪೂರ್ಣ ಗ್ರಾನೈಟ್ ನೀಡಿದ ರಾಜಶೇಖರ್ ಕೊಡುಗೆ ಅಪಾರವಾಗಿದೆ ಎಂದು ಬೇಲೂರು ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಪ್ರಭಾಕರ್ ಹೇಳಿದರು.