ಹಾಸನ ಜಿಲ್ಲಾಡಳಿತದಿಂದ ಹಾಸನಾಂಬೆ ದರ್ಶನಕ್ಕೆ ತಯಾರಿ.

0
55

ಟುಡೇ ಹಾಸನ ನ್ಯೂಸ್ ವರದಿ ಹಾಸನ

ವರ್ಷಕ್ಕೊಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬ ದೇವಿ ದೇಗುಲದ ಬಾಗಿಲು ತೆರೆಯಲು ಇನ್ನು ಕೇವಲ 15 ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಬಾರಿಗೆ ಭಕ್ತರ ಅನುಕೂಲಕ್ಕಾಗಿ ಹಾಸನಾಂಬ
ಈ ಬಾರಿ ಅ.24ರಿಂದ ನವೆಂಬರ್‌ 3 ರವರೆಗೆ ಒಟ್ಟು 11 ದಿನಗಳ ಕಾಲ ಹಾಸನಾಂಬ ದೇಗುಲದ ಬಾಗಿಲು ತೆರೆದಿರಲಿದೆ.

ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಗೊಂದಲ ಹಾಗು ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಹಾಸನಾಂಬಾ ಆ್ಯಪ್‌ ಡೆವಲಪ್‌ ಮಾಡಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ. ಆ್ಯಪ್‌ ಮೂಲಕವೇ ಭಕ್ತರಿಗೆ ಬೇಕಾದ ಮಾಹಿತಿ ಒದಗಿಸಲು ಯೋಜನೆ ರೂಪಿಸಲಾಗಿದೆ.

ಜಿಲ್ಲಾಡಳಿತದಿಂದ ಈಗಾಗಲೇ ಹಾಸನಾಂಬೆ ದರ್ಶನಕ್ಕೆ ತಯಾರಿ ಆರಂಭಗೊಂಡಿವೆ. ಹಾಸನಾಂಬ ದರ್ಶನೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಯೋಜನೆ ಹಾಕಿಕೊಂಡು, ಅದರಂತೆ ದೇವಿಯ ದರ್ಶನ ಸಮಯ, ಟಿಕೆಟ್‌ ಕೌಂಟರ್‌, ತೆರಳಬೇಕಾದ ಮಾರ್ಗ, ವಾಹನ ನಿಲುಗಡೆಗೆ ಸ್ಥಳ ಸೇರಿ ಇತ್ಯಾದಿ ಗೊಂದಲಗಳನ್ನು ಪರಿಹರಿಸಲು ಈ ಆ್ಯಪ್‌ ನೆರವಾಗಲಿದೆ.

ಹಾಸನಾಂಬಾ ಆ್ಯಪ್‌ ಜೊತೆಗೆ ವೆಬ್‌ಸೈಟ್‌ ಕೂಡ ಸಿದ್ಧಪಡಿಸಲಾಗುತ್ತಿದೆ. ವೆಬ್‌ಸೈಟ್‌ ಮೂಲಕವೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತರಿಗೆ ಮಾಹಿತಿ ಒದಗಿಸಲಾಗುತ್ತದೆ. ಅಲ್ಲದೇ ಫೆಸ್‌‍ಬುಕ್‌, ಯೂಟ್ಯೂಬ್‌ ಸೇರಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಹಾಸನಾಂಬ ದರ್ಶನೋತ್ಸವದ ಪ್ರಚಾರ ಮತ್ತು ಮಾಹಿತಿ ಹಂಚಿಕೊಳ್ಳಲು ವಿಶೇಷವಾಗಿ ಈ ಬಾರಿ ಗಮನ ಹರಿಸಲಾಗಿದೆ.

ಪುಷ್ಪಾಲಂಕಾರಕ್ಕೆ ಲಾಲ್‌ಬಾಗ್‌ ನೆರವು:
ಹಾಸನಾಂಬ, ಸಿದ್ದೇಶ್ವರಸ್ವಾಮಿ ದೇಗುಲಗಳಿಗೆ ಹೂವಿನ ಅಲಂಕಾರ ಮಾಡಲು ಬೆಂಗಳೂರಿನ ಲಾಲ್‌ಬಾಗ್‌ ನೆರವು ಕೋರಲು ಈ ಬಾರಿ ನಿರ್ಧರಿಸಲಾಗಿದೆ. ಈ ಹಿಂದೆ ವರ್ಷಗಳಲ್ಲಿ ಗುತ್ತಿಗೆದಾರರ ಮೂಲಕ ಪುಷ್ಪಾಲಂಕಾರ ಮಾಡಿಸಲಾಗುತ್ತಿತ್ತು. ಈ ಬಾರಿ ಇನ್ನಷ್ಟು ಆಕರ್ಷಕ ರೀತಿಯಲ್ಲಿ ದೇಗುಲವನ್ನು ಸಿಂಗರಿಸಲು ತೋಟಗಾರಿಕೆ ಇಲಾಖೆಗೆ ವಹಿಸಲು ನಿರ್ಧರಿಸಲಾಗಿತ್ತು. ಅದರಂತೆ ಲಾಲ್‌ಬಾಗ್‌ ನೆರವಿನಲ್ಲಿ ಹೂವಿನ ಅಲಂಕಾರ ಮಾಡಲು ಯೋಜನೆ ರೂಪಿಸಲಾಗಿದೆ. ಅಲ್ಲದೇ ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೂ ಸಿದ್ಧತೆ ನಡೆಸಲಾಗುತ್ತಿದೆ. ದೇವಿ ದರ್ಶನಕ್ಕೆ ಬರುವ ಭಕ್ತರು ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಈ ಬಾರಿ ಹಲವು ಆಕರ್ಷಣೆ:
ಕಳೆದ ವರ್ಷದಂತೆ ಸಹಸಮಯ ಕ್ರೀಡೆಗಳಾದ ಹೆಲಿಟೂರಿಸಂ, ಪ್ಯಾರಾಮೋಟರ್‌, ಪ್ಯಾರಾ ಗ್ಲೈಡಿಂಗ್‌ ಕೂಡ ಇರಲಿದೆ. ಮೈಸೂರು ದಸರಾ ಮಾದರಿಯಲ್ಲೇ ದೀಪಾಲಂಕಾರ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದು, ಕಳೆದ ಬಾರಿಗಿಂತ ಈ ವರ್ಷ ಹೆಚ್ಚು ವಿಸ್ತರಣೆ ಮಾಡಲಾಗುವುದು, ಸೆಸ್ಕಾಂ ಅಧಿಕಾರಿಗಳ ಮಾರ್ಗದರ್ಶನದಲ್ಲೇ ವಿದ್ಯುತ್‌ ದೀಪಾಲಂಕಾರ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಮಾರುತಿ ಅವರು ತಿಳಿಸಿದ್ದಾರೆ.

ವರ್ಷಕ್ಕೆ ಒಮ್ಮೆ ಅಶ್ವಯುಜ ಮಾಸದ ಕೃಷ್ಣಪಕ್ಷ ಶುಕ್ಲಮಾಸದ ಪೂರ್ಣಿಮೆ ನಂತರ ಬರುವ ಗುರುವಾರ ಹಾಸನಾಂಬೆ ದೇಗುಲದ ಬಾಗಿಲು ತೆಗೆದರೆ, ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುವುದು ಸಂಪ್ರದಾಯ. ಈ ಬಾರಿ ಅ.24ರಿಂದ ನ.3ರವರೆಗೆ ಭಕ್ತರಿಗೆ ದರ್ಶನಾವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. 2023ರ ನ.2ರಿಂದ ನ.15ರವರೆಗೆ 14 ದಿನಗಳಲ್ಲಿ ಪ್ರಥಮ ಮತ್ತು ಅಂತಿಮ ದಿನ ಹೊರತುಪಡಿಸಿ 12 ದಿನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಬಾರಿ 9 ದಿನ ದರ್ಶನಾವಕಾಶ ಇರುವ ಕಾರಣ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ.

ತಿರುಪತಿ ಲಡ್ಡು ವಿವಾದದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ಲಡ್ಡು ಮತ್ತು ದೊನ್ನೆ ಪ್ರಸಾದ ತಯಾರಿಕೆ ಗುತ್ತಿಗೆಯನ್ನು ಜಿಲ್ಲಾಡಳಿತ ಈ ಬಾರಿ ಬೆಂಗಳೂರಿನ ಇಸ್ಕಾನ್‌ಗೆ ವಹಿಸಿದೆ. ಪ್ರತಿವರ್ಷ ಲಡ್ಡು ತಯಾರಿಕೆ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡುತ್ತಿದ್ದ ಕಾರಣ ಗುತ್ತಿಗೆ ಪಡೆಯಲು ತೀವ್ರ ರಾಜಕೀಯ ಪ್ರಭಾವ ಬೀರಲಾಗುತ್ತಿತ್ತು. ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಕೊಬ್ಬು ಸೇರಿಸಲಾಗಿದೆ ಎಂಬ ಆರೋಪ ಬಿರುಗಾಳಿ ಎಬ್ಬಿಸಿದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತ ಹಾಸನಾಂಬೆ ಲಡ್ಡು ಪ್ರಸಾದದ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಹಾಗಾಗಿ ಲಡ್ಡು ಮತ್ತು ದೊನ್ನೆ ಪ್ರಸಾದವನ್ನು ನಿರ್ಮಿತಿ ಕೇಂದ್ರದ ಮೇಲ್ವಿಚಾರಣೆ ಮೂಲಕ ಇಸ್ಕಾನ್‌ ಸಂಸ್ಥೆಗೆ ವಹಿಸಿದೆ.

ಬಾಯಾರಿಕೆ ನೀಗಿಸಲು ಉದ್ದನೆಯ ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ಬೆಣ್ಣೆ, ಹಾಲು, ನೀರು ನಿರಂತರ ಪೂರೈಕೆ. ತಾತ್ಕಾಲಿಕ ಶೌಚಾಲಯಗಳನ್ನು 25ರಿಂದ 50 ಕ್ಕೆ ಹೆಚ್ಚಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ನಿಮಿಷದಿಂದ ನಿಮಿಷದ ಮಾಹಿತಿಯನ್ನು ಪಡೆಯಲು ವಾರ್ ರೂಮ್. ಮುಖ್ಯ ದ್ವಾರದಿಂದ ಭಕ್ತರನ್ನು ತಪ್ಪಿಸಲು ವಿಐಪಿಗಳಿಗೆ ತ್ವರಿತ ಪ್ರತಿಕ್ರಿಯೆ ಕೋಡ್‌ನೊಂದಿಗೆ ಪಾಸ್‌ಗಳು ಮತ್ತು ಗುರುತಿನ ಚೀಟಿಗಳನ್ನು ಒದಗಿಸಲಾಗುತ್ತದೆ.

:::::::::::::::::::::::::::::::::::::::::;;;;;;;;;::::::;;;;;;;;;
ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಒಂಬತ್ತು ದಿನಗಳು ಮಾತ್ರ ಅವಕಾಶವಿರುತ್ತದೆ. ಭಕ್ತಾದಿಗಳಿಗೆ ದೇವಿ ದರ್ಶನ ಪಡೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸುಸಜ್ಜಿತ ಸಿದ್ಧತೆ ಮಾಡಿಕೊಳ್ಳುವುದರ ಜತೆಗೆ ಕಳೆದ ಬಾರಿ ಕಂಡುಬಂದಿರುವ ಸಣ್ಣಪುಟ್ಟ ಲೋಪದೋಷಗಳನ್ನು ಗಮನಿಸಿ ಸರಿಪಡಿಸಲು ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ.

ಸಿ ಸತ್ಯಭಾಮ ಜಿಲ್ಲಾಧಿಕಾರಿ