ಮಳೆಗೆ ಮನೆ ಕುಸಿತ : ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

0
41

ಬೇಲೂರು.

ನೆನ್ನೆ ರಾತ್ರಿ ಸುರಿದ ಮಳೆಯ ಕಾರಣದಿಂದಾಗಿ ಪೋನ್ನಥಪುರ ಗ್ರಾಮದಲ್ಲಿ ಮನೆ ಕುಸಿದು ಕೂದಲೆಳೆ ಅಂತರದಲ್ಲಿ ಕುಟುಂಬ ಪಾರಾದ ಘಟನೆ ನಡೆದಿದೆ.

ಬೇಲೂರು ತಾಲೂಕಿನ ಹಳೇಬೀಡು ಹೋಬಳಿ ಯಲಹಂಕ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೋನ್ನಥಪುರ ಕಾಲೋನಿಯ ಮರಿಯಮ್ಮ ಕುಮಾರಸ್ವಾಮಿ ದಂಪತಿಗಳಿಗೆ ಸೇರಿದ ಮನೆಯಲ್ಲಿ ಎಂದಿನಂತೆ ಊಟ ಮುಗಿಸಿ ಮಲಗಿದ್ದ ವೇಳೆ ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದ್ದು ಕುಟುಂಬ ಸದಸ್ಯರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಇನ್ನೂ ಈ ವಿಚಾರವಾಗಿ ಮನೆ ಕಳೆದುಕೊಂಡ ಸಂತ್ರಸ್ತೆ ಮರಿಯಮ್ಮ ಮಾತನಾಡಿ, ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬರುತ್ತಿದ್ದು, ರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದ್ದು ಮನೆಯಲ್ಲಿದ್ದ ದಿನಸಿ ಸಾಮಾಗ್ರಿಗಳು ಸೇರಿದಂತೆ ಮನೆಯ ಎಲ್ಲ ವಸ್ತುಗಳು ನೆಲಸಮವಾಗಿದೆ, ಒಪ್ಪತ್ತಿನ ಊಟಕ್ಕೆ ಕಷ್ಟ ಪಡುವ ನಾವು ಇದೀಗ ಇರುವ ಮನೆಯನ್ನು ಕಳೆದುಕೊಂಡ ಬೀದಿಗೆ ಬರುವಂತಾಗಿದ್ದು, ದಯವಿಟ್ಟು ಸರ್ಕಾರದವರು ಪರಿಹಾರ ಕಲ್ಪಿಸಿ ನಮಗೆ ವಾಸ ಮಾಡುವುದಕ್ಕೆ ಸೂರು ಕಲ್ಪಿಸಿಕೊಡಬೇಕೆಂದು ಕೈ ಮುಗಿದು ಮನವಿ ಮಾಡಿದರು.