ಟುಡೇ ಹಾಸನ ನ್ಯೂಸ್ ವರದಿ.
ಹಾಸನ ಜಿಲ್ಲೆಯ, ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಗುಂಡನ ಬೆಳ್ಳೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ದಲಿತ ತಾಯಿ-ಮಗಳಿಗೆ ಸವರ್ಣೀಯನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಮೀನಾಕ್ಷಿ ಹಲ್ಲೆಗೆ ಒಳಗಾಗಿರುವ ದಲಿತ ಮಹಿಳೆಯಾಗಿದ್ದು, ಅರೋಪಿ ಪವನ್ ಕುಮಾರ್ ತಲೆಮರೆಸಿಕೊಂಡಿದ್ದಾನೆ.
ಘಟನೆ ವಿವರ : ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಗುಂಡನ ಬೆಳ್ಳೂರು ಗ್ರಾಮದಲ್ಲಿ ಪವನ್ ಕುಮಾರ್ ಎಂಬಾತ ದಲಿತ ಮಹಿಳೆ ಮೀನಾಕ್ಷಿ ಎಂಬವರಿಗೆ ಸಾಲ ನೀಡಿದ್ದು, ಸಾಲ ಮರುಪಾವತಿ ಮಾಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯ ಮನೆಯಲ್ಲಿದ ಕಬ್ಬಿಣದ ಪೈಪ್ ಗಳನ್ನ ತೆಗೆದುಕೊಂಡು ಹೋಗಿದ್ದು, ಬಳಿಕ ಮಹಿಳೆಯು ಸಾಲ ಮರು ಪಾವತಿ ಮಾಡಲು ಹೋದ ವೇಳೆಯಲ್ಲಿ ಮೀನಾಕ್ಷಿ ಹಾಗೂ ಅವರ ಪುತ್ರಿ ರಕ್ಷಿತಾ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು, ಗಾಯಗೊಂಡಿರುವ ತಾಯಿ-ಮಗಳು ಇಬ್ಬರು ಆಲೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಪವನ್ ಕುಮಾರ್ ಮೇಲೆ ದಲಿತ ಮಹಿಳೆ ಮೀನಾಕ್ಷಿ ಅವರು ದೂರು ನೀಡಿದ್ದಾರೆ.
ಸೂಕ್ತ ನ್ಯಾಯಕ್ಕಾಗಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಜಿಲ್ಲಾಧ್ಯಕ್ಷ ಪ್ರದೀಪ್ ಒತ್ತಾಯ..! : ಸಂತ್ರಸ್ತೆಯನ್ನು ಭೇಟಿ ಮಾಡಿರುವ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ತಂಡ ತಕ್ಷಣವೇ ದೂರು ದಾಖಲಿಸಿ ಆರೋಪಿಯನ್ನು ಹುಡುಕಿ ಕಾನೂನಾತ್ಕವಾಗಿ ಶಿಕ್ಷೆ ವಿಧಿಸಿವುದರ ಜೊತೆಗೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಒದಗಿಸಬೇಕು ಮತ್ತು ಮಾತೆತ್ತಿದರೆ ದಲಿತರ ರಕ್ಷಣೆ ಮಾಡುತ್ತೇವೆ ಎನ್ನುವ ಕಾಂಗ್ರೇಸ್ ಸರ್ಕಾರ ಇವತ್ತು ದಲಿತರನ್ನು ರಕ್ಷಣೆ ಮಾಡುವ ವಿಚಾರದಲ್ಲಿ ವಿಫಲವಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ದಲಿತ ತಾಯಿ-ಮಗಳ ಮೇಲೆ ಮಾಡಿರುವ ಪವನ್ ಕುಮಾರ್‌ನನ್ನು ಹುಡುಕಿ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದರೆ ಸಂಬಧಿಸಿದ ಕಛೇರಿ ಮುಂದೆ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ :- ದಿನೇಶ್ ಬೆಳ್ಳಾವರ.