ಟುಡೇ ಹಾಸನ ನ್ಯೂಸ್ ವರದಿ.
ಸಾಧನೆಗೆ ವಯಸ್ಸಿನ ಹಂಗಿಲ್ಲ, ಅಂತೆಯೇ ಸಾಧನೆ ಎನ್ನುವುದು ಯಾರ ಸ್ವತ್ತಲ್ಲ ಎನ್ನುವ ಮಾತಿನಂತೆ ಬೇಲೂರು ಪಟ್ಟಣದ ಶ್ರೀಯುತ ನರಸಿಂಹಸ್ವಾಮಿ ಮತ್ತು ಶ್ರೀಮತಿ ಚೂಡಾಮಣಿ ರವರ ಮಗಳಾದ ಕುಮಾರಿ ಶ್ರೇಯಾ, ಈ ಬಾರಿ ಬೇಲೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆಯುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು..! ಸಾಧನೆಗೆ ನಿಲುಕದ್ದು ಯಾವುದೂ ಇಲ್ಲ ಎಂಬ ಮಾತಿನಂತೆ ಎಲ್ಲೋ ಹುಟ್ಟಿದ ನದಿಯೊಂದು ತನ್ನದೇ ಆದ ದಾರಿಯನ್ನು ಮಾಡಿಕೊಂಡು ಅವೆಷ್ಟೋ ಅಡೆತಡೆಗಳನ್ನು ಮೆಟ್ಟಿನಿಂತು, ಹರಿಯುವ ದಾರಿಯನ್ನು ನಿರ್ಮಿಸಿ ಮನುಜ ಕುಲಕ್ಕೆ, ಪ್ರಾಣಿ ಪಕ್ಷಿಗಳಿಗೆ, ಸುಂದರ ಪರಿಸರಕ್ಕೆ ಸಹಕಾರಿಯಾಗಿ, ಪರೋಪಕಾರಿಯಾಗಿ, ಕೊನೆಗೆ ಸಮುದ್ರವನ್ನು ಸೇರಿ ತನ್ನ ಜೀವನವನ್ನು ಅರ್ಥಪೂರ್ಣವಾಗಿ ಸಾರ್ಥಕಗೊಳಿಸುತ್ತದೆ. ಅದೇ ರೀತಿ ಕಲೆಯೂ ಕೂಡಾ ಎಂದೂ ನಿಂತ ನೀರಲ್ಲ, ಅದೊಂದು ಹರಿಯುವ ನದಿ. ಅವೆಷ್ಟೋ ಅಡೆ ತಡೆಗಳನ್ನು ಮೆಟ್ಟಿ ನಿಂತು, ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಹೊಸ—ಹೊಸ ವಿಭಿನ್ನ ದಾರಿಯೊಂದಿಗೆ ಸಾದನೆಯ ಪಥದಲ್ಲಿ ಸಾಗುತ್ತದೆ. ಅದೇ ರೀತಿ ಶ್ರೇಯಾ ಕೂಡ ವಿಧ್ಯಾಭ್ಯಾಸದ ಜೊತೆಗೆ ಸಂಗೀತ ಕ್ಷೇತ್ರದಲ್ಲೂ ಒಂದು ಕೈ ಮೇಲು ಎಂಬಂತೆ ಈಗಾಗಲೇ ವಿವಿಧ ಕಾರ್ಯಕ್ರಮಗಳಲ್ಲಿ ಡೋಲು ವಾದನ ನೀಡಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ತನ್ನ ಮುಡಿಗೆರಿಕೊಂಡಿದ್ದಾರೆ.
ಇನ್ನೂ ಮುಂದಿನ ದಿನಗಳಲ್ಲೂ ಕೂಡ ಸಂಗೀತ ಕ್ಷೇತ್ರದಲ್ಲಿ ನಿಮ್ಮ ಗಣನೀಯ ಸೇವೆ ಇದೆ ರೀತಿ ಮುಂದುವರಿಯಲಿ ಎಂಬುದು ಟುಡೇ ನ್ಯೂಸ್ ಹಾಸನ ವಾಹಿನಿಯ ಆಶಯ.
-ದಿನೇಶ್ ಬೆಳ್ಳಾವರ.