ಹಾಸನಾಂಬೆ ಉತ್ಸವ – ಬೇಲೂರು ಶಾಸಕರಿಗೆ ಅವಮಾನ – ತೀವ್ರ ಖಂಡನೆ

0
53

ಟುಡೇ ಹಾಸನ ನ್ಯೂಸ್‌ ವರದಿ, ಬೇಲೂರು.

ಹಾಸನದ ಶಕ್ತಿದೇವತೆ ಎಂದೇ ಖ್ಯಾತಿಯಾಗಿರುವ ಹಾಸನಾಂಬೆ ಉತ್ಸವದ ಸಂದರ್ಭದಲ್ಲಿ ಜಿಲ್ಲಾಡಳಿತ ಬೇಲೂರು ಶಾಸಕರಾದ ಹೆಚ್.ಕೆ.ಸುರೇಶ್ ಅವರಿಗೆ ಅವಮಾನ ಮಾಡಿರುವುದು ನಿಜಕ್ಕೂ ಶೋಚನೀಯವಾಗಿದೆ ಈ ವರ್ತನೆಯನ್ನು ಖಂಡಿಸಲಾಗುತ್ತದ್ದು ಪ್ರತಿಭಟನೆ ಮೂಲಕ ಉತ್ತರ ನೀಡಲಾಗುತ್ತದೆ ಎಂದು ಬೇಲೂರು ಬಿಜೆಪಿ ಯುವ ಮೋರ್ಚ ಹೆಬ್ಬಾಳು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗೋಣಿಸೋಮನಹಳ್ಳಿ ವಿನಯ್ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರ್ಷಕ್ಕೆ ಒಂದು ಭಾರಿ ದರ್ಶನ ಅವಕಾಶವನ್ನು ಭಕ್ತರಿಗೆ ಕಲ್ಪಿಸುವ ಹಾಸನದ ಶಕ್ತಿದೇವತೆ ಹಾಸನಾಂಬೆ ಈ ಭಾರಿ ಉತ್ಸವ ನಿಜಕ್ಕೂ ಗೊಂದಲವಾಗಿದೆ. ಕಾರಣ ವಿಐಪಿ ಮತ್ತು ವಿವಿಐಪಿ ಪಾಸ್‌ಗಳನ್ನು ಬೇಕಾಬಿಟ್ಟಿ ವಿತರಿಸಿದ ಕಾರಣದಿಂದ ಜನರು ದಿನಪೂರ್ತಿ ಕಾಯಬೇಕಾದ ಹೀನ ಪರಿಸ್ಥಿತಿ ಬಂದಿದೆ. ಸಕ್ಕರೆಕಾಯಿಲೆ ಮತ್ತು ಇನ್ನಿತರ ಅನಾರೋಗ್ಯವಂತೆ ಗೋಳು ನಿಜಕ್ಕೂ ಹೇಳತೀರದು ಎಂದ ಅವರು ಹಾಸನಾಂಬೆ ಉತ್ಸವ ಹಾಸನದಲ್ಲಿ ನಡೆಯುತ್ತಿದೋ ಅಥಾವ ತುಮಕೂರಿನಲ್ಲಿ ನಡೆಯುತ್ತಿರುವ ಬಗ್ಗೆ ಅನುಮಾನ ಕಾಡುತ್ತಿದೆ. ತುಮಕೂರು ಭಾಗದಲ್ಲಿ ಬಂದ ಸಾವಿರಾರು ಭಕ್ತರಿಗೆ ಜಿಲ್ಲಾಡಳಿತ ವಿಶೇಷ ದರ್ಶನ ವ್ಯವಸ್ಥೆ ಮಾಡುವ ಮೂಲಕ ಸರ್ವಾಧಿಕಾರಿ ವರ್ತನೆಯನ್ನು ತೋರಿಸಿದ್ದಾರೆ. ಅಲ್ಲದೆ ರಾಜ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯುಡಿಯೂರಪ್ಪನವರು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರರವರು ಆಗಮಿಸಿದ ವೇಳೆ ಜಿಲ್ಲಾಡಳಿತ ನಡೆದುಕೊಂಡ ರೀತಿಯ ಬಗ್ಗೆ ಬೇಲೂರು ಶಾಸಕರು ಬೇಸರ ವ್ಯಕ್ತ ಪಡಿಸಿದ್ದಾರೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಜನರಿಂದ ಚುನಾಯಿತರಾದ ಶಾಸಕರಲ್ಲಿ ನಡೆದುಕೊಂಡ ರೀತಿಯನ್ನು ಬಿಜೆಪಿ ಯುವಮೋರ್ಚ ತೀವ್ರವಾಗಿ ಖಂಡಿಸುತ್ತದೆ ಎಂದು ತಮ್ಮ ಅಕ್ರೋಶವನ್ನು ವ್ಯಕ್ತ ಪಡಿಸಿದರು.

ಈಗಾಗಲೇ ಕಂದಾಯ ಮತ್ತು ಪೊಲೀಸ್ ಇಲಾಖೆ ನಡುವೆ ಮಾತಿನ ಚಕಮುಖಿ ಮತ್ತು ಕೈಮಿಲಾಸುವ ಹಂತಕ್ಕೆ ಹೋಗಿದೆ ಎಂದರೆ ಜಿಲ್ಲಾಡಳಿತ ಕಾರ್ಯವೈಖರಿ ಬಗ್ಗೆ ಜನರು ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಅವರಿಗೆ ಬೇಕಾದರವರಿಗೆ ಮಾತ್ರ ವಿಶೇಷ ಪ್ರವೇಶ ಮತ್ತು ಉಳಿದ ದೂರ ದೂರದ ಬಂದ ಭಕ್ತರು ಇಡೀ ದಿನವೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಲೂರು ಶಾಸಕರು ಒಬ್ಬ ಜವಾಬ್ದರಿತನದಿಂದ ಕ್ಷೇತ್ರದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ ಹೊರತು ಇಲ್ಲಿನ ಕಾಲಕಳೆಯಲು ಬಂದಿಲ್ಲ ಎಂಬ ಬಗ್ಗೆ ಮೊದಲು ತಿಳಿದುಕೊಳ್ಳಬೇಕಿದೆ. ಬೇಲೂರು ಶಾಸಕರಿಗೆ ಅದ ಅವಮಾನ ಇಡೀ ಕ್ಷೇತ್ರಕ್ಕೆ ಆಗಿದೆ. ಇಲ್ಲಿನ ಒಂದು ಪಕ್ಷವನ್ನು ಓಲೈಸುವ ಕೆಲಸ ನಡೆಯಿತ್ತಿದೆ. ಮುಂದಿನ ದಿನದಲ್ಲಿ ಇಂತಹ ಕೆಲಸ ಮಾಡುವರಿಗೆ ಇವರಿಗೆ ತಾಯಿ ಹಾಸನಾಂಬೆ ತಕ್ಕ ಶಾಸ್ತಿ ಮಾಡಲಿ ಎಂದು ಹೇಳಿದರು.

ವರದಿ :- ದಿನೇಶ್‌ ಬೆಳ್ಳಾವರ.