ಟುಡೇ ಹಾಸನ ನ್ಯೂಸ್, ಬೇಲೂರು.
ಬೇಲೂರು ಗೆಂಡೇಹಳ್ಳಿ ಮೂಡಿಗೆರೆ ರಸ್ತೆಯ ಕಳಸಿನಕೆರೆ ಏರಿ ರಸ್ತೆ ತೀವ್ರವಾಗಿ ಹಾಳಾಗುವ ಮೂಲಕ ಸಂಚಾರಕ್ಕೆ ಕಷ್ಟವಾಗಿದೆ ಶೀಘ್ರವೇ ಸಂಬಂಧಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನ ನೀಡಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವೆಂದು ಇಲ್ಲಿನ ಸಂಘಟನೆಗಳು ಮತ್ತು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಹೌದು..! ಪ್ರವಾಸಿ ತಾಣ ಹಾಗೂ ಶಿಲ್ಪಕಲೆಗಳ ತವರು ಎಂದೇ ಕರೆಯಲ್ಪಟ್ಟ ಬೇಲೂರಿನ ಪಟ್ಟಣದ ಸಮೀಪದ ಕನಸಿನಕೆರೆ ಏರಿ ಮೂಲಕ ಗೆಂಡೆಹಳ್ಳಿ ಮೂಡಿಗೆರೆಗೆ ಧರ್ಮಸ್ಥಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಯಾತ್ರಾ ಸ್ಥಳಗಳಿಗೆ ಈ ಮೂಲಕ ತೆರಳಬಹುದಾಗಿದೆ ಇಂತಹ ರಸ್ತೆ ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳ ಮೌನ ಅಧಿಕಾರಿಗಳ ದಿವ್ಯ ನಿರ್ಲಕ್ಷತನದಿಂದ ರಸ್ತೆ ತೀವ್ರವಾಗಿ ಹಾಳಾಗುವ ಮೂಲಕವಾಗಿ ವಾಹನಗಳು ಸವಾರರಿಗೆ ಕಷ್ಟವಾಗಿದೆ. ಶೀಘ್ರವೇ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸುವುದರ ಮೂಲಕವಾಗಿ ರಸ್ತೆಗೆ ಕಾಯಕಲ್ಪವನ್ನು ನೀಡಬೇಕು ಎಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಂ ಕೆ ಆರ್ ಸೋಮೇಶ್ ಬೇಲೂರು ಪಟ್ಟಣದ ಸಮೀಪದಲ್ಲಿನ ಕನಸಿನ ಕೆರೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಉಂಟು ಇಂತಹ ಕೆರೆ ಏರಿಯ ಮೇಲೆ ಗೆಂಡೆಹಳ್ಳಿ ಮೂಡಿಗೆರೆ ಅನೇಕ ಕರಾವಳಿ ಭಾಗದ ಯಾತ್ರಾ ಸ್ಥಳಗಳಿಗೆ ಇಲ್ಲಿಂದ ತೆರಳುವ ಅವಕಾಶಗಳಿವೆ. ಆದರೆ ರಸ್ತೆಯ ಪ್ರಾರಂಭದ ಕನಸಿನಕೆರೆ ಏರಿ ಹೆದ್ದಾರಿ ಹದಗೆಟ್ಟ ಪರಿಣಾಮದಿಂದ ರಸ್ತೆಯ ತುಂಬಾ ಗುಂಡಿ ಬಿದ್ದ ದೆಸೆಯಲ್ಲಿ ವಾಹನ ಸಂಚಾರ ತೀವ್ರ ಕಷ್ಟವಾಗಿದ್ದು ಅಪಘಾತಗಳಿಗೆ ಎಡೆ ಮಾಡುತ್ತಿದೆ ಅದಲ್ಲದೆ ಮಳೆಗಾಲದ ಸಂದರ್ಭದಲ್ಲಿ ಇಲ್ಲಿ ತೆರಳುವುದು ಅತ್ಯಂತ ಕಷ್ಟವಾಗಿದೆ ಕೆಲ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳು ಇನ್ನಿತರ ವಾಹನಗಳು ಅಪಘಾತದ ಘಟನೆಗಳು ಕೂಡ ಇಲ್ಲಿ ಸಾಕ್ಷಿಯಾದ ಕಾರಣದಿಂದ ಶೀಘ್ರವೇ ಈ ರಸ್ತೆಗೆ ಶಾಶ್ವತ ವಾದಂತಹ ಕಾಮಗಾರಿಯನ್ನು ನಡೆಸಬೇಕು ಎಂದು ಜಯ ಕರ್ನಾಟಕ ಸಂಘಟನೆ ರಸ್ತೆಗೆದು ಹೋರಾಟವನ್ನು ನಡೆಸಿ ಸಂಬಂಧ ಪಟ್ಟವರಿಗೆ ಲಿಖಿತ ಮೂಲಕ ಮತ್ತು ಮೌಖಿಕವಾಗಿ ಮನವಿ ದೂರನ್ನು ನೀಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಶೀಘ್ರವೇ ಈ ಬಗ್ಗೆ ಗಮನ ಹರಿಸಬೇಕು ಇಲ್ಲವಾದರೆ ಹೋರಾಟದ ಮೂಲಕವಾಗಿ ಉತ್ತರ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೆಂಡೆಹಳ್ಳಿ ಮೂಡಿಗೆರೆ ರಸ್ತೆಯಲ್ಲಿ ನೂರಾರು ಹಳ್ಳಿಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಇಂತಹ ರಸ್ತೆಗೆ ಶಾಶ್ವತವಾದ ಕಾಮಗಾರಿ ನಡೆಸಬೇಕೆಂದು ಹಲವಾರು ಬಾರಿ ಮನವಿ ನಡೆಸಲಾಗಿದೆ ಆದರೂ ಬೇಲೂರು ಪಟ್ಟಣದ ಸಮೀಪದ ಕನಸಿನಕೆರೆ ಏರಿ ರಸ್ತೆ ತೀವ್ರವಾಗಿ ಹಾಳಾದ ಕಾರಣದಿಂದ ಮಳೆಗಾಲದಲ್ಲಿ ಮತ್ತು ರಾತ್ರಿಯ ಸಂದರ್ಭದಲ್ಲಿ ವಾಹನ ಚಲಿಸುವುದು ಅತ್ಯಂತ ಕ್ಲಿಷ್ಟಕರವಾಗಿದೆ ಈ ಬಗ್ಗೆ ಸಂಬಂಧಪಟ್ಟಂತ ಇಲಾಖೆಗಳು ಕನಿಷ್ಠ ಗುಂಡಿ ಮುಚ್ಚುವಂತಹ ಕೆಲಸಕ್ಕೆ ಮುಂದಾಗಬೇಕು ಅಲ್ಲದೆ ಕೆರೆ ಏರಿಗೆ ಸೂಕ್ತವಾದಂತಹ ರೀತಿಯಲ್ಲಿ ಡಾಂಬರ್ ರಸ್ತೆಯನ್ನು ಸುಭದ್ರವಾಗಿ ನಿರ್ಮಿಸಬೇಕು ಎರಡು ಕಡೆಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಿ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ಬಾಣಸವಳ್ಳಿ ಅಶ್ವಥ್.ಮಾಜಿ ಅಧ್ಯಕ್ಷರು ತಾಲ್ಲೂಕು ಪಂಚಾಯತ ಬೇಲೂರು.