ಟುಡೇ ಹಾಸನ ನ್ಯೂಸ್, ಬೇಲೂರು.
ವಿಶ್ವ ಪಾರಂಪರಿಕಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಜಾಗತಿಕ ಮನ್ನಣೆ ಪಡೆದ ಬೇಲೂರಿನ ಮೇಲೆ ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಣೆ ಮಾಡುತ್ತಿದ್ದಾರೆ. ಕನಿಷ್ಟ ಸೌಜನ್ಯಕ್ಕೂ ಜಿಲ್ಲಾ ಮಂತ್ರಿಗಳು ಬೇಲೂರಿನ ಸಮಸ್ಯೆಗಳ ಬಗ್ಗೆ ಗಮನ ನೀಡುತ್ತಿಲ್ಲ, ಶೀಘ್ರವೇ ಯಗಚಿಗೆ ಬಾಗಿನ ಅರ್ಪಣೆ, ಹೊಯ್ಸಳ ಮತ್ತು ಹಲ್ಮಿಡಿ ಉತ್ಸವ ನಡೆಸಲು ಸರ್ಕಾರ ಮುಂದಾಗಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವೆಂದು ಇಲ್ಲಿನ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಬೇಲೂರು ಪಟ್ಟಣದ ಸಮೀಪದ ಯಗಚಿ ಜಲಾಶಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್. ೨೦೦೪ ರಲ್ಲಿ ಯಗಚಿ ಜಲಾಶಯ ನಿರ್ಮಿಸಿದ್ದು, ಅನ್ಯ ತಾಲ್ಲೂಕಿಗೆ ಮಾತ್ರ ಉಪಯುಕ್ತವಾಗಿದೆ ಹೊರತು ಬೇಲೂರು ತಾಲ್ಲೂಕಿಗೆ ಜೋಳಿಗೆ ಸಿಕ್ಕಿದೆ. ಇದಕ್ಕೆ ಕಾರಣ ಇಲ್ಲಿನ ಇಚ್ಚಾಶಕ್ತಿ ಇಲ್ಲದ ರಾಜಕಾರಣಿಗಳು ಪ್ರವಾಸಿತಾಣ ಬೇಲೂರಿನ ಅಭಿವೃದ್ದಿಗೊಳಿಸಲು ಮೀನಾ-ಮೇಷ ಎಣಿಸಿದ್ದಾರೆ. ಕಳೆದ ಭಾರಿ ಶಾಸಕರಾಗಿದ್ದು ಕೆ.ಎಸ್.ಲಿಂಗೇಶ್ ಅವರು ಕೆಆರ್‌ಎಸ್ ಮಾದರಿಯಲ್ಲಿ ಹೈಟಕ್ ಉದ್ಯಾನವನ ನಿರ್ಮಿಸುವ ಭರವಸೆ ನೀಡಿದ್ದರೂ ಇಲ್ಲಿಯ ತನಕ ಬರುವ ಪ್ರವಾಸಿಗರಿಗೆ ಕನಿಷ್ಟ ಶೌಚಾಲಯ ಇಲ್ಲದಿರುವುದು ನಿಜಕ್ಕೂ ಶೋಚನೀಯ, ಯಗಚಿಗೆ ಸೂಕ್ತ ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮಾರ ಇಲ್ಲವಾಗಿದೆ. ಅಲ್ಲದೆ ಯಗಚಿ ಸಮೀಪದ ನೂರಾರು ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಯಗಚಿ ಜಲಾಶಯದ ನೀರು ಮಾತ್ರ ಚಿಕ್ಕಮಗಳೂರು ಮತ್ತು ಹೊಳೆನರಸೀಪುರಕ್ಕೆ ಹರಿಯುತ್ತಿದೆ ಈ ಬಗ್ಗೆ ಹತ್ತಾರು ಭಾರಿ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸಿದರೂ ಯಾವ ಪ್ರಯೋಜವಾಗಿಲ್ಲ, ಜಿಲ್ಲಾ ಮಂತ್ರಿಗಳು ಬೇಲೂರಿನ ಮೇಲೆ ಏಕೆ? ಮಲತಾಯಿಧೋರಣೆ ಅನುಸರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ)ಪ್ರವೀಣಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ, ಮಾತನಾಡಿ, ಐತಿಹಾಸಿಕ ಮತ್ತು ಭವ್ಯ ಪರಂಪರೆಯನ್ನು ಹೊಂದಿರುವ ಬೇಲೂರಿನಲ್ಲಿ ನಡೆಯುತ್ತಿದ್ದ ಹೊಯ್ಸಳ ಮಹೋತ್ಸವ ಹಾಗೂ ಕನ್ನಡಕ್ಕೆ ಪ್ರಥಮ ಶಿಲಾ ಶಾಸನ ನೀಡಿದ ಹಲ್ಮಿಡಿಯ ಉತ್ಸವಗಳು ಸ್ಥಗೀತವಾಗಿದೆ. ಇದಕ್ಕೆ ಕಾರಣ ಜಿಲ್ಲಾಡಳಿತ ಮತ್ತು ಜಿಲ್ಲಾ ಮಂತ್ರಿಗಳ ಮೃದುದೋರಣೆಯಾಗಿದೆ ಎಂದು ಕಿಡಿಕಾರಿದ ಅವರು ಜಿಲ್ಲಾ ಮಂತ್ರಿಗಳಾದ ಕೆ.ಎನ್.ರಾಜಣ್ಣ ಇವರಿಗೆ ಹಾಸನಾಂಬೆ ಮಾತ್ರ ಉತ್ಸವ ನಡೆಸಲು ಮನಸ್ಸು ಮಾಡುತ್ತಾರೆ. ಆದರೆ ಅದಾಯವಿಲ್ಲದ ಕಡೆ ತಿರಗಿ ನೋಡುತ್ತಿಲ್ಲ, ಈಗಾಗಲೇ ನಾಲ್ಕು ಭಾರಿ ಯಗಚಿ ಜಲಾಶಯ ಭರ್ತಿಯಾಗಿದೆ. ಜಿಲ್ಲಾ ಮಂತ್ರಿಗಳ ಇಲ್ಲಿಗೆ ಆಗಮಿಸಿ ಬಾಗಿನ ಅರ್ಪಣೆ ಜೊತೆಗೆ ಬೇಲೂgರು ಅಭಿವೃದ್ಧಿಗೆ ಸೂಕ್ತ ಅನುದಾನ ನೀಡಬೇಕು. ಸ್ಥಳೀಯ ಶಾಸಕರು ಕೂಡ ತಮ್ಮ ಇಚ್ಚಾಶಕ್ತಿಯಿಂದ ನೆನಗುಂದಿಗೆ ಬಿದ್ದ ಹೊಯ್ಸಳ ಮಹೋತ್ಸವ, ಹಲ್ಮಿಡಿ ಉತ್ಸವ ನಡೆಸಲು ಮುಂದಾಗಬೇಕು ಎಂದಯ ಆಗ್ರಹಿಸಿದರು.
ವರದಿ :- ದಿನೇಶ್ ಬೇಳ್ಳಾವರ.