ವಿದ್ಯುತ್ ಸ್ಪರ್ಶಕ್ಕೆ 2 ಕುರಿ ಸ್ಥಳದಲ್ಲೇ ಸಾವು.

0
92

ಟುಡೇ ಹಾಸನ ನ್ಯೂಸ್‌ ವರದಿ, ಬೇಲೂರು

ಬೇಲೂರು ಪಟ್ಟಣದ ಜೆ.ಪಿ ನಗರದ ಪೈವ್ ಸ್ಟಾರ್ ಬಾರ್ ಪಕ್ಕದ ವಿದ್ಯುತ್ ಟ್ರಾನ್ಸ್ಫಾರ್ರ್ ಬಳಿ ಎರಡು ಕುರಿಗಳು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜೆ.ಪಿ ನಗರದ ನಿವಾಸಿ ಮೊಹಮ್ನದ್ ಯೂಸೆಪ್ ಅವರ ಮಗ ಇಂತಿಯಾಜ್ ಅವರು ಒಟ್ಟು 8 ಕುರಿಗಳನ್ನು ಮೇಯಿಸಿಕೊಂಡು ಬರುವಾಗ ಸಂಜೆ 5 ಗಂಟೆಯ ವೇಳೆ ಮೂರು ಕುರಿಗಳು ಎಡಬದಿಯಲ್ಲಿ ಸಾಗಿದ್ದು ಆ ವೇಳೆ ಟ್ರಾನ್ಸ್ ಫಾರ್ಮ ಇರುವ ಜಾಗದ ಸುತ್ತಮುತ್ತ ಗ್ರೌಂಡಿಗ್ ಆಗಿದೆ. ಈ ವೇಳೆ ಎರಡು ಕುರಿಗಳು ಗ್ರೌಂಡಿಂಗ್ ಇಂದ ಸ್ಥಳದಲ್ಲೇ ಸತ್ತಿದ್ದು ಇನ್ನೊಂದು ಕುರಿ ಗಂಭೀರ ವಾಗಿ ಗಾಯವಾಗಿದೆ. ತಕ್ಷಣ ಕುರಿ ಮಾಲೀಕರಾದ ಇಂತಿಯಾಜ್ ಅವರು ಕೆಇಬಿ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಗ್ರೌಂಡಿಂಗ್ ಇಂದ ಕುರಿಗಳು ಸಾವನ್ಬಪ್ಪಿದರ ಬಗ್ಗೆ ಕೇಳಿದಾಗ ಕೆ.ಇ.ಬಿಯವರು ಉಡಾಫೆಯಿಂದ ಉತ್ತರಿಸಿದ್ದಾರೆ. ಸುಮಾರು 30 ಸಾವಿರ ಬೆಲೆ ಬಾಳುವ ಕುರಿಗಳು ಸತ್ತಿದ್ದು ನಾವು ಸಾಲ ಮಾಡಿ ತಂದಿದ್ದೇವೆ. ನಾವು ಅವುಗಳಿಗೆ ಮೇವು ಮೇಯಿಸಿಕೊಂಡು ಕುವೆಂಪುನಗರದ ಶೆಡ್ ಗೆ ಹೊಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಎಂದರಲ್ಲದೆ ಇಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಾರೆ. ಅವರ ಜೀವಕ್ಕೆ ಏನಾದರೂ ತೊಂದರೆ ಆದರೆ ಹೊಣೆಯಾರು. ಇಲ್ಲಿರುವ ಟ್ರಾನ್ಸ್ ಫಾರ್ಮ್ ಮೊದಲು ಸರಿಪಡಿಸಿ ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಕೆಇಬಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ವರದಿ : ರವಿಹೋಳ್ಳ