ಕನ್ನಡ ನಾಮಫಲಕ ಕಡ್ಡಾಯ : ಕರವೇ ಕಾರ್ಯಕರ್ತರಿಂದ ಪುರಸಭೆ ಅದ್ಯಕ್ಷರಿಗೆ ಮನವಿ.

0
76

ಟುಡೇ ನ್ಯೂಸ್‌ ಹಾಸನ ವರದಿ, ಬೇಲೂರು.

ಬೇಲೂರು ಪಟ್ಟಣದ ಅಂಗಡಿ ಮುಂಗಟ್ಟು ವಾಣಿಜ್ಯ ಸಂಕೀರ್ಣಗಳ ಮೇಲಿನ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಬಳಕೆಯನ್ನು ಮಾಡಬೇಕು ಎಂದು ಸರ್ಕಾರ ಈಗಾಗಲೇ ಕಠಿಣ ಸುತ್ತೋಲೆಯನ್ನು ನೀಡಿದ್ದರೂ ಕೂಡ ಯಾವುದೇ ರೀತಿಯಾಗಿ ಪ್ರಯೋಜನವಾಗಿಲ್ಲ ಈ ಕಾರಣದಿಂದ ಸರ್ಕಾರದ ಆದೇಶವನ್ನು ಪಾಲಿಸಬೇಕು ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟದ ಮೂಲಕವಾಗಿ ಉತ್ತರ ನೀಡುತ್ತದೆ ಈ ಬಗ್ಗೆ ಪುರಸಭೆ ಕ್ರಮವಹಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಬೇಲೂರು ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಪುರಸಭಾ ಅಧ್ಯಕ್ಷರಾದ ಎ ಆರ್ ಅಶೋಕ್ ಅವರಿಗೆ ಮನವಿ ಪತ್ರ ನೀಡಿದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೇಲೂರು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ನಾಡು, ನುಡಿ, ಜಲಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೀದಿಗಿಳಿದು ನಿರಂತರವಾದ ಹೋರಾಟವನ್ನು ನಡೆಸುತ್ತಾ ಬಂದಿದೆ. ಅಂತೆಯೇ ಕನ್ನಡದ ಅನ್ನವನ್ನು ಉಂಡು ಇಲ್ಲಿನ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡ ಬಹುತೇಕ ಅಂಗಡಿ ಮುಂಗಟ್ಟು ವಾಣಿಜ್ಯ ಸಂಕೀರ್ಣದ ಮಾಲೀಕರು ಹೆಚ್ಚು ಹೆಚ್ಚು ಅನ್ಯ ಭಾಷೆಗಳ ನಾಮಫಲಕಗಳನ್ನು ಹಾಕುವ ಮೂಲಕವಾಗಿ ಕನ್ನಡಕ್ಕೆ ಅವಮಾನವನ್ನು ಮಾಡುತ್ತಿದ್ದಾರೆ ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ ಎ ನಾರಾಯಣಗೌಡರ ನೇತೃತ್ವದಲ್ಲಿ ಈ ಹಿಂದೆ ಉಗ್ರವಾದ ಹೋರಾಟವನ್ನು ನಡೆಸಿದ ಪ್ರತಿಫಲದಿಂದ ಕರ್ನಾಟಕ ಸರ್ಕಾರ ಅಂಗಡಿ ಮುಂಗಟ್ಟು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಶೇಕಡ 60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಕೆಯನ್ನು ಮಾಡಬೇಕು ಎಂದು ಸುತ್ತೋಲೆಯನ್ನು ತಂದಿದೆ ಆದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗಳ ತೀವ್ರ ವೈಫಲ್ಯದಿಂದ ಸರ್ಕಾರದ ಆದೇಶ ಇವತ್ತು ಇಂದು ಉಲ್ಲಂಘನೆ ಆಗುತ್ತಿದೆ ಈ ಕಾರಣದಿಂದ ಕರ್ನಾಟಕ ರಕ್ಷಣಾ ವೇದಿಕೆ ಬೇಲೂರು ತಾಲೂಕು ಘಟಕದಿಂದ ನಾವುಗಳು ಇಂದು ಪುರಸಭಾ ಅಧ್ಯಕ್ಷರಾದ ಎ.ಆರ್ ಅಶೋಕ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದು ಕೂಡಲೇ ಬೇಲೂರು ಪಟ್ಟಣದಲ್ಲಿ ಇರುವ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡವನ್ನು ಬಳಕೆ ಮಾಡುವಂತಹ ವ್ಯವಸ್ಥೆಯನ್ನು ಮಾಡಬೇಕು ಇಲ್ಲವಾದರೆ ಎಂಟು ದಿನಗಳ ಬಳಿಕ ಪುರಸಭಾ ಮುಂದೆ ಉಗ್ರ ಪ್ರತಿಭಟನೆಯನ್ನು ನಡೆಸುವುದಲ್ಲದೆ ಹೆಚ್ಚು ಅನ್ಯ ಭಾಷೆಗಳನ್ನು ಬಳಸಿದ ನಾಮಫಲಕಗಳಿಗೆ ಮಸಿ ಬಳಿಯುವುದು ಮತ್ತು ತೆರೆವುಗೊಳಿಸಲಿ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುರಸಭಾ ಅಧ್ಯಕ್ಷ ಎ. ಆರ್ ಅಶೋಕ್ ಮಾತನಾಡಿ, ನಾಡು ನುಡಿ ಜಲದ ಬಗ್ಗೆ ನಮಗೆ ಅಪಾರ ಗೌರವವಿದೆ ಕಾರಣ ನಾವು ಜನಿಸಿದ ಬೇಲೂರು ತಾಲೂಕು ಕನ್ನಡದ ಪ್ರಥಮ ಶಿಲಾ ಶಾಸನ ನೀಡಿದಂತಹ ಜಾಗದಲ್ಲಿರುವ ನಮಗೆ ನಾಡು-ನುಡಿಯ ಬಗ್ಗೆ ಅಪಾರವಾದ ಪ್ರೇಮ ಪ್ರೀತಿ ಅಭಿಮಾನ ಇರುವ ಕಾರಣದಿಂದಲೇ ಈಗಾಗಲೇ ಸರ್ಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು ಎಂಬ ನಿಯಮದಲ್ಲೇ ಅಡಿಯಲ್ಲಿ ಬೇಲೂರು ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟು ವಾಣಿಜ್ಯ ಸಂಕೀರ್ಣಗಳಿಗೆ ಅಧಿಕೃತವಾಗಿ ನೋಟಿಸ್ ನೀಡಿ ಶೇಕಡ 60ರಷ್ಟು ಕನ್ನಡದ ಬಳಕೆಯನ್ನು ಮಾಡಲಿಕ್ಕೆ ಸೂಚನೆ ನೀಡಲಾಗುತ್ತದೆ ತಪ್ಪಿದರೆ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮವನ್ನು ತೆಗೆದುಕೊಳ್ಳಲು ಮೀನಾ ಮೇಷ ಎಣಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಸುಜಯ ಕುಮಾರ್, ಪುರಸಭಾ ಸದಸ್ಯರಾದ ಜಮಾಲ್ಲುದ್ದೀನ್ ಮತ್ತು ಪ್ರಭಾಕರ್,
ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಗೌರವಾಧ್ಯಕ್ಷ ತಾರಾನಾಥ, ಮತ್ತು ರಾಜು ಇನ್ನೂ ಮುಂತಾದವರು ಹಾಜರಿದ್ದರು.

     ವರದಿ :- ಹೆಬ್ಬಾಳು ಹಾಲಪ್ಪ.