ಬೇಲೂರು ಲಯನ್ಸ್ ಸೇವಾ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

0
43

ಟುಡೇ ಹಾಸನ ನ್ಯೂಸ್‌ ವರದಿ ಬೇಲೂರು

ಬೇಲೂರು ಲಯನ್ಸ್ ಕ್ಲಬ್ಬಿಗೆ ಜಿಲ್ಲಾ ರಾಜ್ಯಪಾಲರಾದ ಬಿಎಮ್ ಭಾರತಿ ಇವರು ಅಧಿಕೃತ ಭೇಟಿ ನೀಡುವ ಮೂಲಕ ಬೇಲೂರು ಲಯನ್ಸ್ ಸೇವಾ ಸಂಸ್ಥೆಯಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಮುಂದಿನ ದಿನದಲ್ಲಿ ಲಯನ್ ಸಂಸ್ಥೆ ಅಗ್ರಮಾನ್ಯ ಸ್ಥಾನವನ್ನು ಪಡೆಯಲಿ ಎಂದು ಹಾರೈಸಿದರು ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯಪಾಲರಿಗೆ ಲಯನ್ಸ್ ಪದಾಧಿಕಾರಿಗಳು ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು.

ಬೇಲೂರು ಪಟ್ಟಣದ ಯಗಚಿ ಸೇತುವೆಯ ಮಂಜುನಾಥ ಕಲ್ಯಾಣ ಮಂಟಪದ ಹಿಂಭಾಗದಲ್ಲಿನ ಲಯನ್ಸ್ ಭವನದಲ್ಲಿ ನಡೆದ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಬಿಎಮ್ ಭಾರತೀ ಅವರು ಬೇಲೂರು ಲಯನ್ಸ್ ಕ್ಲಬ್ ಹೇಳಿ ಕೇಳಿ ಪ್ರವಾಸಿ ತಾಣ ಇರುವ ಕಾರಣ ಇಲ್ಲಿನ ಭವನವನ್ನು ಅತ್ಯಂತ ಸುಂದರವಾಗಿ ಮಾಡಿದ್ದಾರೆ. ಈಗಾಗಲೇ ಅನೇಕ ಕ್ಲಬ್ಬುಗಳು ಸೇವಾ ಚಟುವಟಿಕೆಗಳನ್ನು ನಡೆಸುತ್ತಿವೆ ಆದರೆ ಸೇವಾ ಚಟುವಟಿಕೆಗಳನ್ನು ನಡೆಸಲು ಸ್ಥಳಾವಕಾಶ ಇರುವ ಕಾರಣದಿಂದ ಬೇಲೂರು ಇದಕ್ಕೆ ಮಾದರಿಯಾಗಿದೆ ಇರುವ ಅಲ್ಪ ಸದಸ್ಯರಲ್ಲೇ ಶ್ರಮಪಟ್ಟು ದಾನಿಗಳಿಂದ ಸಹಕಾರ ಪಡೆದು ಬೃಹತ್ ಭವನವನ್ನು ನಿರ್ಮಿಸಿದ್ದಾರೆ ಭವನವು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಮೀಸಲಾಗಬೇಕು, ವಿಶೇಷವಾಗಿ ಬೇಲೂರು ಲಯನ್ಸ್ ಸಂಸ್ಥೆಗೆ ಶಾಶ್ವತ ಭವನವಿರುವ ಕಾರಣ ಇಲ್ಲಿ ಖಾಯಂ ಚಟುವಟಿಕೆ ನಡೆಸಲು ಸಂಸ್ಥೆಯ ಸದಸ್ಯರು ಆಲೋಚನೆ ನಡೆಸಬೇಕಿದೆ ಹೊಲಿಗೆ ತರಬೇತಿ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಶಾಶ್ವತವಾದಂತ ಸೇವಾ ಚಟುವಟಿಕೆಗಳು ನಡೆಸಲು ಸಂಸ್ಥೆಯ ಅಧ್ಯಕ್ಷರುಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಡಾಕ್ಟರ್ ಚಂದ್ರಮೌಳಿ ಮಾತನಾಡಿ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಬೇಲೂರಿನಲ್ಲಿ ಕಳೆದ 2011 ರಿಂದ ಆರಂಭವಾಗಿದೆ ಅಂದಿನ ಅಧ್ಯಕ್ಷರಾದ ಎನ್ ಆರ್ ಗಿರೀಶ್ ಅವರ ಸಾರಥ್ಯದಲ್ಲಿ ಆರಂಭವಾದ ಸಂಸ್ಥೆ ಆಯಾಯ ಅಧ್ಯಕ್ಷರ ಅವಧಿಯಲ್ಲಿ ತಮ್ಮದೇ ಆದಂತಹ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಈ ಕಾರಣದಿಂದಲೇ ಲಯನ್ಸ್ ಸಂಸ್ಥೆ ಇವತ್ತು ಹೆಮ್ಮರವಾಗಿ ಬೆಳೆದಿದೆ. ಆರೋಗ್ಯ ಶಿಕ್ಷಣ ಪರಿಸರ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದೇವೆ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಶಿಬಿರಗಳನ್ನು ನಡೆಸಲಾಗಿದೆ ಮುಂದಿನ ದಿನಗಳಲ್ಲೂ ಕೂಡ ಗ್ರಾಮೀಣ ಪ್ರದೇಶಗಳು ಸೇರಿದಂತೆ ಪಟ್ಟಣದಲ್ಲಿನ ಕ್ಲಬ್ ಸ್ಲಂ ನಿವಾಸಿಗಳಲ್ಲೂ ಕೂಡ ಆರೋಗ್ಯ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಹತ್ತಾರು ಶಿಬಿರಗಳನ್ನು ಆಯೋಜನೆಯನ್ನು ಮಾಡಲಾಗಿದೆ ಎಂದ ಅವರು ಪ್ರತಿಯೊಬ್ಬರು ಕೂಡ ಪರಿಸರಕ್ಕೆ ಸಂಬಂಧಪಟ್ಟಂತೆ ಕಾಳಜಿ ವಹಿಸಬೇಕಿದೆ ಸ್ವಚ್ಛತೆ ನೈರ್ಮಲ್ಯ ಶುದ್ಧ ಕುಡಿಯುವ ನೀರಿನ ಬಳಕೆ ಮಾಲಿನ್ಯ ಇದರ ಬಗ್ಗೆ ಕನಿಷ್ಠ ಜನರಿಗೆ ತಿಳಿಸುವ ಗುಣವನ್ನು ಬೆಳೆಸಿಕೊಳ್ಳಬೇಕಾಗಿದೆ. ಜಿಲ್ಲಾ ರಾಜ್ಯಪಾಲರಾದಂತಹ ಬಿ ಎಂ ಭಾರತಿಯವರು ಬೇಲೂರು ಕ್ಲಬ್ಬಿಗೆ ಭೇಟಿ ನೀಡಿ ಇಲ್ಲಿನ ಸೇವಾ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನಮಗೆ ಸಂತೋಷವಾಗಿದೆ ಈಗಾಗಲೇ ಸೇವಾ ಚಟುವಟಿಕೆಗಳನ್ನು ನಡೆಸಲು ಲಯನ್ಸ್ ಕ್ಲಬ್ಬಿಗೆ ಶಾಶ್ವತವಾದಂತಹ ಕಟ್ಟಡ ಇರೋದ್ರಿಂದ ಸರ್ವ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಮಹತ್ವಪೂರ್ಣ ಕಾರ್ಯಕ್ರಮಗಳನ್ನು ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ಸಂಪುಟ ಗೀತಾರಾವ್, ಪ್ರಾಂತೀಯ ಅಧ್ಯಕ್ಷ ರಾಬಿ ಸೋಮಯ್ಯ, ವಲಯ ಅದ್ಯಕ್ಷ ಅಬ್ದುಲ್ ಲತೀಫ್, ಲಯನ್ಸ್ ರಾಯಭಾರಿ ಎಂ.ಪಿ.ಪೂವಯ್ಯ, ವೆಂಕಟೇಶ್. ಲಯನ್ಸ್ ಸೇವಾ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್ . ಕಾರ್ಯದರ್ಶಿ ಮುಕ್ತಿಯಾರ್ ಅಹಮದ್, ಖಜಾಂಚಿ ಪ್ರಶಾಂತ್, ಗೋಪಿನಾಥ್, ಪುಟ್ಟಸ್ವಾಮಿ,.ಸುರೇಶ್
ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.

-ವರದಿ :- ಹೆಬ್ಬಾಳು ಹಾಲಪ್ಪ.