ಟುಡೇ ಹಾಸನ ನ್ಯೂಸ್ ಬೇಲೂರು
ಬೇಲೂರು ಪಟ್ಟಣ ಹೃದಯ ಭಾಗದ ಹರ್ಡೀಕರ್ ವೃತ್ತದ ಬಳಿ ಪುರಸಭೆ ಮತ್ತು ತಾಲ್ಲೂಕು ಪಂಚಾಯಿತಿಗೆ ಸೇರಿದೆ ಎನ್ನಲಾದ ಜಾಗದಲ್ಲಿ ಕೆಲವರು ಅನಾಧಿಕೃತ ಅಂಗಡಿಗಳನ್ನು ನಿರ್ಮಿಸಿ ಜೀವನ ಸಾಗಿಸುವ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಹೈಟಕ್ ಟಚ್ ಜೊತೆಗೆ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ ಈ ಬಗ್ಗೆ ಸಂಬಂಧ ಪಟ್ಟವರು ಗಮನ ನೀಡಬೇಕು ಎಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೌದು..! ಹರ್ಡೀಕರ್ ವೃತ್ತದಲ್ಲಿನ ಜಾಗ ಸದ್ಯ ಪುರಸಭೆ ಮತ್ತು ತಾಲ್ಲೂಕು ಪಂಚಾಯಿತಿ ನಡುವೆ ಗೊಂದಲಕ್ಕೆ ಕಾರಣವಾಗಿರುವ ಜಾಗದಲ್ಲಿ ಕಳೆದ ಎರಡು ದಶಕದಿಂದ ಕೆಲವರು ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಸಾಗಿಸುವ ವ್ಯಾಪಾರಿಗಳು ಇವತ್ತಿನ ಅಧುನಿಕತೆಗೆ ಮಾರುಹೋಗಿ ಅಂಗಡಿಗಳಿಗೆ ಹೈಟಚ್ ನೀಡುವ ಸಂದರ್ಭದಲ್ಲಿ ಗೊಂದಲದಿAದ ವ್ಯಾಪಾರಿಗಳು ಹೈರಾಣರಾಗಿದ್ದು, ಅಂತಿಮವಾಗಿ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ತುರ್ತುಸಭೆ ಕರೆದು ಬಿದಿರು ಮತ್ತು ಮೂಲವ್ಯಾಪಾರಿಗಳಿಗೆ ಅವಕಾಶ ನೀಡಲು ಸಮ್ಮತಿ ನೀಡಲಾಗಿತ್ತು. ಹಾಗೇಯೆ ಪುರಸಭಾ ಸಾಮಾನ್ಯಸಭೆಯಲ್ಲಿ ಶಾಸಕ ಹೆಚ್.ಕೆ.ಸುರೇಶ್ ಕೂಡ ಮರಪೆಟ್ಟಿಗೆ ಅಂಗಡಿಯನ್ನು ಮಾತ್ರ ಇಟ್ಟುಕೊಳ್ಳಿ ಕಾರಣ ಮುಂದೆ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಯಾವುದೇ ಗೊಂದಲ ಮಾಡಬಾರದು, ಮಾನವೀಯತೆ ದೃಷ್ಟಿಯಿಂದ ಅವಕಾಶ ಕಲ್ಪಿಸಿದೆ ಎಂದು ಶಾಸಕರು ಮತ್ತು ಪುರಸಭಾ ಅಧ್ಯಕ್ಷರು ಸೂಚನೆ ನೀಡಿದರೂ ಕೂಡ ಇಲ್ಲಿನ ವ್ಯಾಪಾರಿಗಳು ಮಾತ್ರ ರಾತ್ರೋರಾತ್ರಿ ಜಾಗ ತಮ್ಮದೆ ಎನ್ನುವ ಭಾವನೆಯಿಂದ ಹೈಟಕ್ ರೀತಿಯಲ್ಲಿ ಅಂಗಡಿ ನಿರ್ಮಿಸಿಲು ಮುಂದಾಗಿದ್ದಾರೆ. ಶೀಘ್ರವೇ ಸಂಬAಧ ಪಟ್ಟವರು ಗಮನ ನೀಡಬೇಕಿದೆ ಇಲ್ಲವಾದರೆ ಕಂಡ ಕಂಡ ಸರ್ಕಾರಿ ಆಸ್ತಿಯಲ್ಲಿ ಕಟ್ಟಡಗಳು ನಾಯಿ ಕೊಡೆಯಂತೆ ತಲೆ ಎತ್ತಲಿವೆ ಎಂದು ತಿಳಿಸಿದ್ದಾರೆ.
ಹರ್ಡಿಕಾರ್ ವೃತ್ತದ ವ್ಯಾಪಾರಿಗಳಿಗೆ ಅನ್ಯಾಯ ನಡೆಯಬಾರದು ಎಂದೇ ಶಾಸಕರ ಸಮ್ಮುತಿಯಿಂದ ಸದ್ಯ ಮರದಪೆಟ್ಟಿಗೆ ರೂಪದಲ್ಲಿ ನಿರ್ಮಿಸಲು ಅವಕಾಶ ನೀಡಲಾಯಿತು. ಆದರೆ ಕೆಲ ವ್ಯಾಪಾರಿಗಳು ಮಾತ್ರ ಇದನ್ನು ಉಲ್ಲಂಘಿಸಿರುವುದು ನಮಗೆ ಬೇಸರ ತಂದಿದೆ. ಮಾನವೀಯತೆ ಬೆಲೆ ಇಲ್ಲವಾಗಿದೆ ಎಂದರು.
ಎ.ಆರ್.ಅಶೋಕ್, ಅಧ್ಯಕ್ಷರು ಪುರಸಭೆ ಬೇಲೂರು.
ಹರ್ಡೀಕರ್ ವೃತ್ತದ ಬಳಿಯ ಜಾಗ ತಾಲ್ಲೂಕು ಪಂಚಾಯಿತಿಗೆ ಸೇರಿದೆ ಎನ್ನುವ ಹಿನ್ನಲೆಯಲ್ಲಿ ನಾನು ಈಗಾಗಲೇ ಅಲ್ಲಿ ಅನಾಧಿಕೃತವಾಗಿ ನಿರ್ಮಿಸುವ ಮಳಿಗೆ ನಿಲ್ಲಿಸಲು ಸೂಚನೆ ನೀಡಿದ್ದೆ ಮತ್ತು ನಮ್ಮದೆ ಜಾಗ ಎನ್ನುವ ಬಗ್ಗೆ ಪುರಸಭೆಗೆ ದಾಖಲೆ ನೀಡುವ ಬಗ್ಗೆ ತಿಳಿಸಿದರು.
ವಸಂತಕುಮಾರ್. ಇಒ ತಾಲ್ಲೂಕು ಪಂಚಾಯಿತಿ ಬೇಲೂರು.
-ವರದಿ :- ಹೆಬ್ಬಾಳು ಹಾಲಪ್ಪ