ಸಭೆಯಲ್ಲಿ ಕನ್ನಡ ನಾಡು ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಕೆಲ ಕಾರ್ಮಿಕ ವರ್ಗದವರು ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರೆ ಬಹುಪಾಲು ಕಾರ್ಮಿಕ ವರ್ಗದವರು ಹಾಗು ಸಂಘದ ಪದಾಧಿಕಾರಿಗಳು ನಮಗೆ ಎಲ್ಲಾ ರೀತಿಯಲ್ಲೂ ಉತ್ತಮವಾಗಿ ಸ್ಪಂದಿಸುತ್ತಿದ್ದು ಇಂತಹ ಪ್ರಾಮಾಣಿಕ ಅಧಿಕಾರಿಗಳು ಹೀಗೆ ಮುಂದುವರೆಯಬೇಕು ಎಂದು ಪ್ರತ್ಯಾರೋಪ ಮಾಡಿದ ಸನ್ನಿವೇಶ ನಡೆದಿದೆ.ಈ ವೇಳೆ ಮಲೆನಾಡು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಮುಮ್ತಾಜ್,ಖಜಾಂಚಿ ವಿಜಯ್ ಆಚಾರ್ಯ,ಕೆ.ಡಿ.ಪಿ ಸದಸ್ಯರಾದ ಸುಹಿಲ್ ಪಾಷ,ನಂದೀಶ್,ನವೀನ್,ಜ್ಯೋತಿ
ಸವಿತಾ ಸಮಾಜದ ಪದಾಧಿಕಾರಿಗಳು,ಹೊಯ್ಸಳ ಪೈಂಟರ್ಸ್ ಸಂಘದ ಅಧ್ಯಕ್ಷರಾದ ಭರತ್,ವಿವಿದ ಕಾರ್ಮಿಕ ಸಂಘದ ಪದಾಧಿಕಾರಿಗಳು ಕಾರ್ಮಿಕರು ಹಾಗು ಇತರರು ಹಾಜರಿದ್ದರು.
ಅನರ್ಹ ಕಾರ್ಮಿಕರ ಕಾರ್ಡುಗಳನ್ನು ಪತ್ತೆ ಹಚ್ಚಿ ಅಂಥವರ ವಿರುದ್ಧ ಶಿಸ್ತು ಕ್ರಮಗಳನ್ನು ಕೈಗೊಂಡು ಅರ್ಹ ಕಾರ್ಮಿಕ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಪಡಬೇಕು, ಈಗಾಗಲೇ ನಮಗೆ ತಿಳಿದಿರುವಂತೆ ತಾಲೂಕಿನಲ್ಲಿ ಬಹುತೇಕ ಅನರ್ಹರು ಕಾರ್ಡುಗಳನ್ನು ಪಡೆಯುತ್ತಿದ್ದು ಅಂಥವರ ಬಗ್ಗೆ ಕೂಲಂಕುಷವಾಗಿ ದಾಖಲೆ ಹಾಗು ಸ್ಥಳ ಪರಿಶೀಲನೆ ನಡೆಸಿ ಕಾರ್ಡುಗಳನ್ನು ರದ್ದುಪಡಿಸಬೇಕು ಹಾಗು ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಾರ್ಮಿಕರ ಮಾಹಿತಿಯನ್ನು ಪ್ರಕಟಿಸಿದ್ದಲ್ಲಿ ಬಹುತೇಕ ಅನರ್ಹ ಕಾರ್ಡುದಾರರ ಮಾಹಿತಿ ಸುಲಬವಾಗಿ ಪತ್ತೆಯಾಗುತ್ತದೆ ಎಂದು ಕೆ.ಡಿ.ಪಿ ಸದಸ್ಯರು ಅಧಿಕಾರಿಗಳಿಗೆ ಸಲಹೆಯನ್ನು ನೀಡಿದರು.