ಅದ್ಧೂರಿಯಾಗಿ ಜರುಗಿದ ಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

0
50

ಟುಡೇ ಹಾಸನ ನ್ಯೂಸ್‌ ವರದಿ ಬೇಲೂರು

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆಯಲ್ಲಿ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಜಾತ್ರಾ ಮಹೋತ್ಸವವನ್ನು ಆಚರಿಸಲಾಯಿತು. ಈ ಕಾರ‍್ಯಕ್ರಮವನ್ನು ಉದ್ದೇಶಿಸಿ ಉತ್ಸವ ಸಮಿತಿ ಅಧ್ಯಕ್ಷ ಚಿದಾನಂದ್ ಎಂ.ಕೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ದಸರಾ ವಿಜಯ ದಶಮಿಯಂದು ಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಏರ್ಪಡಿಸಲಾಗುತ್ತದೆ. ಅಲಂಕಾರಗೊಂಡ ಉತ್ಸವ ಮೂರ್ತಿಯನ್ನು ಅಡ್ಡ ಲಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನದ ಸುತ್ತ ಮೂರು ಪ್ರದಕ್ಷಿಣೆ ಹಾಕಿದ ನಂತರ ವಾಹನದಲ್ಲಿಟ್ಟು ಮಾರ್ನವಮಿ ಕಟ್ಟಯೆ ಕಡೆ ಮೆರವಣಿಗೆ ಹೊರಡಲಾಗುತ್ತದೆ.ನಂತರ ಆಗಮಿಸಿದ ಸರ್ವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಗುವುದು. ಕಳೆದ 50 ವರ್ಷಗಳಿಂದ ದೇವರ ಸೇವೆ ಮಾಡುತ್ತಿರುವ ಗ್ರಾಮದ ಹುಚ್ಚಪ್ಪ, ರಾಜು, ಕೆಂಚಮ್ಮ, ಗುರುಶಾಂತ, ಪುಟ್ಟಯ್ಯರವರನ್ನು ಎನ್.ಬಿ ಶಿವಕುಮಾರ್ ಹಾಗೂ ಸಮಿತಿಯ ವತಿಯಿಂದ ಸನ್ಮಾನಿಸಲಾಗುತ್ತದೆ ಎಂದು ನುಡಿದರು.

ಈ ವೇಳೆ ಉತ್ಸವ ಸಮಿತಿ ಉಪಾಧ್ಯಕ್ಷ ಕೋದಂಡರಾಮರಾಜ್, ಕರ‍್ಯದರ್ಶಿ ಪರಮೇಶ್ವರಪ್ಪ ಎನ್.ಪಿ, ಸದಸ್ಯರಾದ ಸಂಪತ್, ದಿವಾಕರ್, ಕೃಷ್ಣೇಗೌಡ, ಶಿವಕುಮಾರ್, ದಿನೇಶ್, ಭಾಸ್ಕರ್ ಹಾಗೂ ಇನ್ನೂ ಮುಂತಾದವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಜರುಗಿತು.

                                                               -ವರದಿ :- ರಂಜೀತ್‌ ಕುಮಾರ್‌ ಕೆ.ಎಸ್‌