ಬೇಲೂರು ಪಟ್ಟಣದ ಹರ್ಡಿಕರ್ ವೃತ್ತದಲ್ಲಿರುವ ಶೆಡ್ ಗಳನ್ನು ರಾತ್ರೋರಾತ್ರಿ ಪುರಸಭಾ ಅಧಿಕಾರಿಗಳು ತೆರವು ಮಾಡಲು ಮುಂದಾದಾಗ ವ್ಯಾಪಾರಸ್ಥರು ವಿಷ ಸೇವಿಸಲು ಮುಂದಾದಾಗ ವಿಚಾರ ತಿಳಿದು ಸ್ಥಳಕ್ಕೆ ಬಂದ ಪುರಸಭೆ ಅಧ್ಯಕ್ಷ ಪುರಸಭಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಈ ವಿಚಾರವಾಗಿ ಪುರಸಭಾ ಅಧ್ಯಕ್ಷ ಅಶೋಕ್ ಮಾತನಾಡಿ, ಅಧಿಕಾರಿಗಳು ಮತ್ತು ರಾಜಕಾರಣಿಗಳು ಜನಸಾಮಾನ್ಯರಿಗೆ ಅನುಕೂಲವಾಗುವಂತ ಕೆಲಸಗಳನ್ನು ಮಾಡಬೇಕು, ಕಳೆದ 4೦ ವರ್ಷಗಳಿಂದ ಬೇಲೂರು ಪಟ್ಟಣದ ಹರ್ಡಿಕಾರ್ ವೃತ್ತದ ಬಳಿ ಶೆಡ್ ನಿರ್ಮಾಣ ಮಾಡಿಕೊಂಡು ಹಲವು ಕುಟುಂಬಗಳು ಜೀವನ ನಡೆಸಿಕೊಂಡು ಬರುತ್ತಿದ್ದಾರೆ, ಈ ವಿಚಾರವಾಗಿ ಮೊನ್ನೆ ಬೇಲೂರು ಪುರಸಭಾಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾನ್ಯ ಶಾಸಕರ ಜೊತೆಯಲ್ಲಿ ಕೂಡ ಚರ್ಚೆ ಮಾಡಿ ಗುಡಾರ ಹಾಕದೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ವ್ಯಾಪಾರ ಮಾಡುವಂತೆ ತಿಳಿಸಲಾಗಿತ್ತು, ಆದರೆ ನೆನ್ನೆ ರಾತ್ರಿ ದಿಢೀರ್ ಎಂದು ಪುರಸಭಾ ಮುಖ್ಯಾಧಿಕಾರಿಗಳು ಸಿಬ್ಬಂದಿಗಳೊಂದಿಗೆ ಶೆಡ್ ಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ, ಯಾರ ಆದೇಶದ ಮೇಲೆ ಅವರು ತೆರವುಗೊಳಿಸಲು ಬಂದಿದ್ದಿರ ಎಂದು ಕೇಳಿದರು ನಮಗೆ ಮಾಹಿತಿ ನೀಡಿತ್ತಿಲ್ಲ, ಯಾವುದೇ ಕಾರಣಕ್ಕೂ ಪುರಸಭಾ ಮುಖ್ಯಾಧಿಕಾರಿಗಳು ಮತ್ತು ಅಧಿಕಾರಿಗಳು ಹಲವು ವರ್ಷಗಳಿಂದ ಇಲ್ಲಿ ವ್ಯವಹಾರ ಮಾಡಿಕೊಂಡು ಜೀವನ ನಡೆಸುತ್ತಿರುವವರಿಗೆ ತೊಂದರೆ ಕೊಡಬಾರದು, ಇಲ್ಲಿ ಯಾರು ಸ್ಥಿತಿವಂತರಲ್ಲ ಎಲ್ಲರೂ ಒಂದು ದಿನದ ಹೊಟ್ಟೆ ಪಾಡಿಗಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ, ಮಾನ್ಯ ಶಾಸಕಲ್ಲೂ ಕೂಡ ಮನವಿ ಮಾಡಿ ಕೇಳಿಕೊಳ್ಳುತ್ತೇನೆ ಇವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಬೇಡಿ, ಅದೇ ರೀತಿ ಪುರಸಭಾ ಮುಖ್ಯಾಧಿಕಾರಿಗಳು ಕೂಡ ಇಷ್ಟೋತ್ತಲ್ಲಿ ಶೆಡ್ ಗಳನ್ನು ತೆರವುಗೊಳಿಸುವ ಅವಶ್ಯಕತೆ ಇಲ್ಲ, ಯಾರ ಆದೇಶದ ಮೇಲೆ ನೀವು ತೆರವುಗೊಳಿಸಲು ಮುಂದಾಗಿದ್ದಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಜಗದೀಶ್, ಗಿರೀಶ್, ಜಮಾಲ್, ಕರವೇ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್, ವೆಂಕಟೇಶ್, ಸುಬ್ರಹ್ಮಣ್ಯ, ಪುರಸಭಾ ಅಧಿಕಾರಿಗಳು ಮತ್ತು ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು.